Thursday, July 23, 2026
Homeಜಿಲ್ಲೆಮಂಗಳೂರು : ಜೆರೋಸಾ ಶಾಲೆಯಾ ಆಡಿಯೋ ವೈರಲ್ ಮಾಡಿದ ಆರೋಪಕ್ಕೆ ವಿದೇಶದಿಂದ ಮಹಿಳೆಗೆ ಜೀವ ಬೆದರಿಕೆ...

ಮಂಗಳೂರು : ಜೆರೋಸಾ ಶಾಲೆಯಾ ಆಡಿಯೋ ವೈರಲ್ ಮಾಡಿದ ಆರೋಪಕ್ಕೆ ವಿದೇಶದಿಂದ ಮಹಿಳೆಗೆ ಜೀವ ಬೆದರಿಕೆ ಕರೆ,ಕೊನೆಗೂ ಎಫ್ಐಆರ್ ದಾಖಲು.

ಮಂಗಳೂರು : ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರು ಶ್ರೀರಾಮನಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಆಡಿಯೋ ಮಾಡಿದ ಪೋಷಕಿಗೆ ಇವರೇ ಎಂದು ಮಹಿಳೆಯ ಕುಟುಂಬ ಸಹಿತ ಫೋಟೋವನ್ನು ಕಿಡಿಗೇಡಿಗಳು ವೈರಲ್ ಮಾಡಿದ ಘಟನೆ ಬೆಳಕಿಗೆ ಬಂದ ಪರಿಣಾಮ ವಿದೇಶದಿಂದ ಈ ಪ್ರಕರಣಕ್ಕೆ ನೀವೇ ಕಾರಣ ಎಂದು ಹೇಳಿ ಮಹಿಳೆಯ ನಂಬರ್ wtsup ,ಹಾಗೂ facebookಲ್ಲಿ ಕುಟುಂಬದ ಫೋಟೋ ಹಾಗೂ ಮೊಬೈಲ್ ನಂಬರ್ ಅನ್ನು ಪೋಸ್ಟ್ ಮಾಡಿ ವೈರಲ್ ಮಾಡಿದ್ದರು. ಅಲ್ಲದೆ, ಪ್ರಕರಣದ ನಂತರ ವಿದೇಶದಿಂದ ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಕಂಕನಾಡಿ ಪ್ರಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅವರು ದೂರು ನೀಡಿದ್ದರು.

ಜೆರೋಸಾ ಶಾಲೆಯಾ ಅವಹೇಳನದ ಬಗ್ಗೆ ವೈರಲ್ ಆಗಿರುವ ಆಡಿಯೋ ಕವಿತಾರದ್ದಲ್ಲದಿದ್ದರೂ ನಿರಂತರ ಬೆದರಿಕೆ ಹಾಕಲಾಗುತ್ತಿದೆ. ಕಂಕನಾಡಿ ಪೊಲೀಸರಿಗೆ ಸ್ಕ್ರೀನ್ ಶಾಟ್, ಆಡಿಯೋ ಸಹಿತ ಕಾನೂನು ಕ್ರಮಕ್ಕಾಗಿ ಮಂಗಳೂರಿನ ಕಂಕನಾಡಿ ನಗರ ಪೊಲೀಸ್ ಠಾಣೆಗೆ‌ ಪೋಷಕಿ ಕವಿತಾ ದೂರು ನೀಡಿದ್ದರು. ಜೆರೋಸಾ ಶಾಲೆಯಲ್ಲಿ ಕವಿತಾರ ಪುತ್ರಿ ಏಳನೇ ತರಗತಿ ಓದುತ್ತಿದ್ದಾಳೆ. ಇನ್ನು ಸಿಸ್ಟರ್ ಪ್ರಭಾ ವಿರುದ್ದ ಪೋಷಕರ ಪ್ರತಿಭಟನೆಯಲ್ಲೂ ಕವಿತಾ ಭಾಗವಹಿಸಿದ್ದರು.ಇದರಿಂದ ಅವರನ್ನು ಕೆಲಸದಿಂದ ವಜಾಮಾಡಿದ್ದರು.

ಮೊದಮೊದಲು ಪೊಲೀಸರು ರಾಜಕೀಯ ಪ್ರೇರಣೆಯ ಮೇರೆಗೆ ದೂರು ಪಡೆಯಲು ನಿರಾಕರಿಸಿದ್ದರು, ವಿದೇಶದಿಂದ ನಿರಂತರ ಬೆದರಿಕೆ ಕರೆ ವಿಚಾರವಾಗಿ ಪೋಷಕಿ ಕವಿತಾ ನೀಡಿದ ದೂರಿನ ಆಧಾರದ ಮೇಲೆ ಕೊನೆಗೂ ಎಫ್ಐಆರ್​ ದಾಖಲಾಗಿದೆ. ದೂರಿನ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಕಂಕನಾಡಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ದೂರುದಾರೆ ನೀಡಿದ್ದ ಆಡಿಯೋ ಕುರಿತು ಕಾನೂನು ತಜ್ಞರ ಅಭಿಪ್ರಾಯಕ್ಕೆ ಪೊಲೀಸರು ಕಾದಿದ್ದರು. ಸದ್ಯ ಅಭಿಪ್ರಾಯ ಪಡೆದು ಕಠಿಣ ಸೆಕ್ಷನ್​ಗಳಡಿ ಪ್ರಕರಣ ದಾಖಲಾಗಿದ್ದು, ಕಂಕನಾಡಿ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular