ಮಂಗಳೂರು : ಜನರಿಗೆ ಚಿನ್ನ,ಬೈಕು, ಕಾರು ,ಮನೆಯ ಆಸೆ ತೋರಿಸಿ ಮಂಕು ಬೂದಿ ಎರಚುವ ಲಕ್ಕೀ ಸ್ಕೀಂ ಸಾಲಿಗೆ ಲಂಚೂಲಾಲ್ ಅವರ ಅಸ್ತ್ರ ಗ್ರೂಪ್ ಕೂಡಾ ಸೇರಿಕೊಂಡಿದೆ. ಅಸ್ತ್ರ ಗ್ರೂಪ್ ಕಳೆದ ವರ್ಷ ಆರಂಭಿಸಿದ್ದ ಲಕ್ಕೀ ಸ್ಕೀಂ ನಲ್ಲಿ ಇರುವ ಬಹುಮಾನಗಳ ಆಸೆಗೆ ಸಾವಿರಾರು ಜನರು ಸ್ಕೀಂ ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಲೈವ್ ಕವರೇಜ್ ಮೂಲಕ ಯಾವುದೇ ವಂಚನೆ ಇಲ್ಲಾ ಅಂತ ಬಿಂಬಿಸಿಕೊಂಡಿದ್ದ ಅಸ್ತ್ರ ಗ್ರೂಪ್ ಇದೀಗ ನೂರಾರು ಜನರಿಗೆ ಬಹುಮಾನ ನೀಡಿದೆ ವಂಚಿಸಿದ್ದಾಗಿ ಆರೋಪ ಕೇಳಿ ಬಂದಿದೆ.
ಸ್ಕೀಂ ನಲ್ಲಿ ಹಣ ಹೂಡಿಕೆ ಮಾಡಿದವರಿಗೆ ಲಕ್ಕೀ ಡ್ರಾ ದಲ್ಲಿ ಬಹುಮಾನ ಸಿಗದೇ ಇದ್ದಲ್ಲಿ ಹಣ ಅಥವಾ ಹಣದ ಮೌಲ್ಯದ ಚಿನ್ನ ನೀಡುವುದಾಗಿ ಅಸ್ತ್ರ ಗ್ರೂಪ್ ಘೋಷಣೆ ಮಾಡಿತ್ತು. ಇದಕ್ಕಾಗಿ ಆನ್ ಲೈನ್ ಮೂಲಕ ಮೊದಲೇ ಹಣ ಬೇಕಾ ಅಥವಾ ಚಿನ್ನ ಬೇಕಾ ಎಂಬುದನ್ನು ಜನರು ನೊಂದಾಯಿಸಬೇಕಾಗಿತ್ತು. 12 ತಿಂಗಳಿಗೆ 12 ಸಾವಿರ ಹಣ ಪಾವತಿಸಿದವರಿಗೆ ಸ್ಕೀಂ ಮುಗಿದ ಬಳಿಕ ಮೂರು ತಿಂಗಳಲ್ಲಿ 15 ಸಾವಿರ ನೀಡುವ ವಾಗ್ದಾನ ಮಾಡಿತ್ತು. ಆದ್ರೆ ಇದೀಗ ಹಲವಾರು ಜನರಿಗೆ ಈ ಹಣ ತಲುಪಿಲ್ಲ ಅನ್ನೋ ಆರೋಪವನ್ನು ಜನರು ಮಾಡಿದ್ಧಾರೆ.
ಅಸ್ತ್ರ ಗ್ರೂಪ್ ನ ಅ್ಯಪ್ ನಲ್ಲಿ ಅಪ್ಡೇಟ್ ಮಾಡಿಕೊಂಡ ಗ್ರಾಹಕರಿಗೆ ಅಸ್ತ್ರ ಗ್ರೂಪ್ ಏಪ್ರಿಲ್ ತಿಂಗಳಲ್ಲಿ 15 ಸಾವಿರ ಹಣ ವಾಪಾಸ್ ಮಾಡಬೇಕಾಗಿತ್ತು. ಆದ್ರೆ ಎಪ್ರೀಲ್ ಕಳೆದು ಜೂನ್ ಆಗಿದ್ರೂ ಹಣ ಮಾತ್ರ ಬಂದಿಲ್ಲ. ನೆಟ್ ವರ್ಕ್ ಮೂಲಕ ಚಂದಾದಾರರಾದ ಅನೇಕರು ತಮ್ಮನ್ನು ಸ್ಕೀಂ ಗೆ ಸೇರಿಸಿದವರ ಮನೆ ಮುಂದೆ ಹೋಗಿ ಹಣ ನೀಡಿ ಅಂತ ಕೇಳಲು ಆರಂಭಿಸಿದ್ದಾರೆ. ಆದ್ರೆ ಅಸ್ತ್ರ ಗ್ರೂಪ್ ನ ಮೇಲೆ ನಂಬಿಕೆ ಇಟ್ಟು ಹಣ ಹೂಡಿಕೆ ಮಾಡಿಸಿದ ಜನರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಮತ್ತೊಂದು ಹೊಸ ಸ್ಕೀಂ ಆರಂಭ ಮಾಡಿರೋ ಲಂಚುಲಾಲ್ ಅವರ ಅಸ್ತ್ರ ಗ್ರೂಪ್ ಇದರಲ್ಲೂ ಸಾವಿರಾರು ಜನರಿಂದ ಹೂಡಿಕೆ ಮಾಡಿಸುತ್ತಿದೆ. ಎಲ್ಲವೂ ಕಾನೂನು ಪ್ರಕಾರವಾಗಿಯೇ ನಡೆಯುತ್ತಿದೆ ವಂಚನೆ ಆಗದಂತೆ ಕಾನೂನು ರೀತಿಯಾಗಿ 5 ಕೋಟಿ ಹಣ ಸರ್ಕಾರದ ಬಳಿ ಡೆಪಾಸಿಟ್ ಮಾಡಲಾಗಿದೆ ಎಂಬೆಲ್ಲಾ ಸುದ್ದಿ ಇದೆ. ಆದ್ರೆ ಗ್ರೌಂಡ್ ಲೆವೆಲ್ ಕಥೆ ಬೇರೆಯೇ ಆಗಿದ್ದು ಹಣ ಕಳೆದುಕೊಂಡವರು ಇದೀಗ ಅಸ್ತ್ರ ಗ್ರೂಪ್ ವಿರುದ್ಧ ಕಿಡಿ ಕಾರಲು ಆರಂಭಿಸಿದ್ದಾರೆ. ಹಣ ಹೂಡಿಕೆ ಮಾಡಿದವರ ಹಣವನ್ನು ತಕ್ಷಣ ಅಸ್ತ್ರ ಗ್ರೂಪ್ ಹಿಂತಿರುಗಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.


