Saturday, July 18, 2026
Homeಜಿಲ್ಲೆಮಂಗಳೂರು : ಚಿಕಿತ್ಸೆ ಪಡೆದು ಜೈಲಿಗೆ ಮರಳಿದ ಕೈದಿಯ ಗುದದ್ವಾರದಲ್ಲಿ ಮೊಬೈಲ್ ಪತ್ತೆ .

ಮಂಗಳೂರು : ಚಿಕಿತ್ಸೆ ಪಡೆದು ಜೈಲಿಗೆ ಮರಳಿದ ಕೈದಿಯ ಗುದದ್ವಾರದಲ್ಲಿ ಮೊಬೈಲ್ ಪತ್ತೆ .

ಮಂಗಳೂರು : ಚಿಕಿತ್ಸೆ ಪಡೆದು ಜೈಲಿಗೆ ಮರಳಿದ ಕೈದಿಯೊಬ್ಬ ತನ್ನ ಗುದದ್ವಾರದಲ್ಲಿ ಮೊಬೈಲ್ ಅಡಗಿಸಿಕೊಂಡು ಬಂದ ಘಟನೆ ಮಂಗಳೂರು ಜೈಲಿನಲ್ಲಿ ಬೆಳಕಿಗೆ ಬಂದಿದೆ.

ಮಹಮ್ಮದ್ ತಾಹಿದ್ ಎಂಬ ಕೈದಿಯನ್ನು ಏಪ್ರಿಲ್ 24ರಂದು ವೆನ್ಲವ್ಕ್ ಆಸ್ಪತ್ರೆಯಲ್ಲಿ ಹಾಸ್ಪಿಟಲ್ ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ನಂತರ ಏಪ್ರಿಲ್ 29ರಂದು ಬಿಡುಗಡೆಗೊಂಡು ಜೈಲಿಗೆ ಮರಳಿದ ವೇಳೆ ಈ ಘಟನೆ ಪತ್ತೆಯಾಗಿದೆ.

ಜೈಲಿನ ಪ್ರವೇಶ ದ್ವಾರದಲ್ಲಿ ಕೆಎಸ್‌ಐಎಸ್‌ಎಫ್ ಸಿಬ್ಬಂದಿ ತಪಾಸಣೆ ನಡೆಸಿದಾಗ ಮೆಟಲ್ ಡಿಟೆಕ್ಟರ್‌ನಲ್ಲಿ ಶಬ್ದ ಕೇಳಿಬಂದಿದೆ. ಇದರಿಂದ ಅನುಮಾನಗೊಂಡ ಸಿಬ್ಬಂದಿ ವಿಚಾರಣೆ ನಡೆಸಿದಾಗ, ಕೈದಿ ತನ್ನ ಗುದದ್ವಾರದಲ್ಲಿ ಮೊಬೈಲ್ ಅಡಗಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ತಕ್ಷಣವೇ ಕೈದಿಯನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಂದ ಕೀಪ್ಯಾಡ್ ಮೊಬೈಲ್ ಹೊರತೆಗೆಸಲಾಗಿದೆ. ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular