Monday, June 1, 2026
Flats for sale
Homeಜಿಲ್ಲೆಮಂಗಳೂರು : ಕಲಾ ನಡಿಗೆ ಜನರ ಬಳಿಗೆ : ಕದ್ರಿ ಉದ್ಯಾನವನದಲ್ಲಿ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮ.

ಮಂಗಳೂರು : ಕಲಾ ನಡಿಗೆ ಜನರ ಬಳಿಗೆ : ಕದ್ರಿ ಉದ್ಯಾನವನದಲ್ಲಿ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮ.

ಮಂಗಳೂರು : ಸಂಗೀತ ಆಲಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುತ್ತದೆ ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮಹಾ ಪ್ರಬಂಧಕ ಅರುಣಾ ಪ್ರಭ ರವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾ ಸಾಧನ ಮಂಗಳೂರು ಹಾಗೂ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ಕದ್ರಿ ಉದ್ಯಾನವನದಲ್ಲಿ ಆಯೋಜಿಸಿದ್ದ ‘ಕಲಾ ನಡಿಗೆ ಜನರ ಬಳಿಗೆ’ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಮಾದರಿಯಾಗಿದ್ದು, ಕಲೆ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಜೇಶ್ ಮಾತನಾಡಿ, ರಾಜ್ಯದಲ್ಲೇ ಮೊದಲ ಬಾರಿಗೆ ‘ಕಲಾ ನಡಿಗೆ ಜನರ ಬಳಿಗೆ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕದ್ರಿ ಉದ್ಯಾನವನ ಸಲಹಾ ಸಮಿತಿ ಸದಸ್ಯ ಜಗನ್ನಾಥ ಗಾಂಭೀರ್, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಕಟ್ಟಾ, ಸಿರಿ ತೋಟಗಾರಿಕೆ ಇಲಾಖೆಯ ರುಕ್ಮಯ್ಯ, ಪತ್ರಕರ್ತರಾದ ಶ್ರೀನಿವಾಸ್ ನಾಯಕ್ ಹಾಗೂ ರಾಜೇಶ್ ದಡ್ಡಂಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಳಿಕ ಕಲಾವಿದರಾದ ವಿಭಾ ನಾಯಕ್, ಹೇಮಂತ್ ಭಾಗವತ್, ಅಶ್ವಿತ್ ಪ್ರಭು, ದೀಪ್ತಿ ಹಾಗೂ ಭೂಮಿ ಅವರ ಸಾನ್ನಿಧ್ಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಂತ್ಯದಲ್ಲಿ ವಿಭಾ ಶ್ರೀನಿವಾಸ್ ನಾಯಕ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular