Tuesday, July 21, 2026
Homeಜಿಲ್ಲೆಬೆಳ್ತಂಗಡಿ : ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕಾಡಿನ ರಸ್ತೆಯಲ್ಲಿ ಬಿಟ್ಟು ಹೋದ ಪಾಪಿಗಳು..!

ಬೆಳ್ತಂಗಡಿ : ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕಾಡಿನ ರಸ್ತೆಯಲ್ಲಿ ಬಿಟ್ಟು ಹೋದ ಪಾಪಿಗಳು..!

ಬೆಳ್ತಂಗಡಿ : ನಾಲ್ಕು ತಿಂಗಳ ಹೆಣ್ಣು ಮಗುವನ್ನು ಬೆಳ್ತಂಗಡಿ  ತಾಲೂಕಿನ ಬೆಳಾಲು ಗ್ರಾಮದ ಕೊಡೋಳುಕೆರೆ -ಮುಂಡ್ರೋಟ್ಟು ರಸ್ತೆಯಲ್ಲಿ ಪಾಪಿಗಳು ಬಿಟ್ಟು ಹೋದ ಘಟನೆ ಇಂದು ಬೆಳಕಿದೆ ಬಂದಿದೆ.

ಯಾರೋ ಸ್ಥಳೀಯರು ರಸ್ತೆಯಲ್ಲಿ ಹೋಗುತ್ತಿರುವಾಗ ಮಗು ಅಳುವ ಸದ್ದು ಕೇಳಿದ್ದು ಬಳಿಕ ರಸ್ತೆಯ ಪಕ್ಕದಲ್ಲಿರುವ ಕಾಡಿನ ಒಳಭಾಗದಲ್ಲಿ ನೋಡಿದಾಗ ನಾಲ್ಕು ತಿಂಗಳ ಪುಟ್ಟ ಹೆಣ್ಣು ಮಗು ಕಾಣುಬಂದಿದೆ. ಸಾರ್ವಜನಿಕರು ರಕ್ಷಿಸಿ ಆರೈಕೆ ಮಾಡಿ ಧರ್ಮಸ್ಥಳ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.

ಸ್ಥಳೀಯರು ಮಗುವನ್ನು ರಕ್ಷಿಸಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಅರೋಗ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಥಳೀಯ ಸಿ ಸಿ ಟಿವಿ ಗಳನ್ನು ಪರಿಶೀಲಿಸುತ್ತಿದ್ದು ಮಗುವಿನ ಪೋಷಕರ ಪತ್ತೆಗೆ ಬಲೆಬೀಸುತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular