Thursday, July 23, 2026
Homeರಾಜ್ಯಬೆಳಗಾವಿ : ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ 6 ಜನ ಸಾವು.

ಬೆಳಗಾವಿ : ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ 6 ಜನ ಸಾವು.

ಬೆಳಗಾವಿ : ಮದುವೆ ಮುಗಿಸಿ ಮನೆಗೆ ವಾಪಸ್​ ಆಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ ಪರಿಣಾಮ ಸ್ಥಳದಲ್ಲೇ ೬ ಜನ ಮೃತಪಟ್ಟ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ ಘಟನೆ ನಡೆದಿದ್ದು,ಒಂದೇ ಕಾರಿನಲ್ಲಿ ಒಂಬತ್ತು ಜನ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ .ಈ ಪೈಕಿ ಆರು ಜನ ಮೃತಪಟ್ಟಿದ್ದು, ಧಾರವಾಡ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ, ಮಹಾರಾಷ್ಟ್ರ ಮೂಲದ ಕಾರು ಎಂದು ಗುರುತಿಸಲಾಗಿದ್ದು ಕಾರು ಚಾಲಕ ಶಾರುಕ್ ಪೆನ್ಡಾರಿ(30), ಇಕ್ಬಾಲ್ ಜಮಾದಾರ್(50), ಸಾನಿಯಾ ಲಂಗೋಟಿ(37), ಉಮ್ರಾ ಬೆಗಮ್ ಲಂಗೋಟಿ(17), ಶಬನಮ್ ಲಂಗೋಟಿ(37), ಪರಾನ್ ಲಂಗೋಟಿ(13) ಮೃತರು. ಇವರೆಲ್ಲರೂ ಧಾರವಾಡ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ.

ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular