Saturday, July 25, 2026
Homeದೇಶಬೆಂಗಳೂರು : 3000 ರೂಪಾಯಿ ಕೊಡಲು ನಿರಾಕರಿಸಿದ ವ್ಯಕ್ತಿಯ ಕೊಲೆ : ಆಟೋ ಚಾಲಕನ ಬಂಧನ.

ಬೆಂಗಳೂರು : 3000 ರೂಪಾಯಿ ಕೊಡಲು ನಿರಾಕರಿಸಿದ ವ್ಯಕ್ತಿಯ ಕೊಲೆ : ಆಟೋ ಚಾಲಕನ ಬಂಧನ.

ಬೆಂಗಳೂರು: ಮೆಜೆಸ್ಟಿಕ್‌ನಿಂದ ಯಶವಂತಪುರ ರೈಲು ನಿಲ್ದಾಣದವರೆಗೆ ಆಟೋರಿಕ್ಷಾದಲ್ಲಿ 7 ಕಿ.ಮೀ ಪ್ರಯಾಣಿಸಲು 3,000 ರೂ.ಗೆ ಕೊಡಲು ನಿರಾಕರಿಸಿದ ಹಿನ್ನೆಲೆ ಆಟೋರಿಕ್ಷಾ ಚಾಲಕ ಥಳಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಸುಬ್ರಹ್ಮಣ್ಯನಗರ ಪೊಲೀಸರು 28 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ, ಮೃತಪಟ್ಟ ಯುವಕ ಒಡಿಶಾ ಮೂಲದ ಅಮೋದ್ ಕರಡೊ (28) ಎಂದು ಗುರುತಿಸಲಾಗಿದೆ.

ಭಾನುವಾರ ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವ ಅಮೋದ್ ಮತ್ತು ಅವರ ಕಿರಿಯ ಸಹೋದರ ಅಯೂಬ್ ಚಂದಾಪುರದಲ್ಲಿ ಸಂಬಂಧಿಕರನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದಾಗ ರಾತ್ರಿ 11 ಗಂಟೆ ಸುಮಾರಿಗೆ ಮೆಜೆಸ್ಟಿಕ್‌ಗೆ ಬಂದು ಮನೆಗೆ ಹೋಗಲು ಯಶವಂತಪುರ ರೈಲು ನಿಲ್ದಾಣಕ್ಕೆ ಆಟೋರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದರು. ಚಾಲಕ ಆರಂಭದಲ್ಲಿ 100 ರೂಪಾಯಿ ನೀಡುವಂತೆ ಕೇಳಿದ್ದು, ಅದಕ್ಕೆ ಒಪ್ಪಿದ್ದನು ಎಂದು ತಿಳಿದುಬಂದಿದೆ.

“ಸಹೋದರಿಬ್ಬರು ಆಟೋ ರಾತ್ರಿ ಆಟೋ ಮೂಲಕ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಚಾಲಕ ಅವರನ್ನು ಮಾತನಾಡಿಸಿದಾಗ ಅವರು ಕರ್ನಾಟಕದವರಲ್ಲ ಎಂದು ತಿಳಿದು ಏಕಾಏಕಿ 3000 ರೂ. ಕೊಡಬೇಕೆಂದು ಬೇಡಿಕೆ ಇಟ್ಟ ಆದರೆ, ಅವರು ಅದನ್ನು ಪಾವತಿಸಲು ನಿರಾಕರಿಸಿದರು, ”ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಜಗಳ ವಿಕೋಪಕ್ಕೆ ತಿರುಗಿತು ಮತ್ತು ಅಶ್ವಥ್ ಸಹೋದರರಿಬ್ಬರ ಮೇಲೆ ಹಲ್ಲೆ ಮಾಡಿ, ಮುಖ ಮತ್ತು ದೇಹದ ಮೇಲ್ಭಾಗಕ್ಕೆ ಚಾಲಕ ಹೊಡೆದಿದ್ದಾನೆ. ಬೆದರಿದ ಇಬ್ಬರೂ ಚಾಲಕನನ್ನು ನಿಲ್ಲಿಸುವಂತೆ ಹೇಳಿದಾಗ , ಚಾಲಕ 3000 ರೂ. ಕೊಡುವಂತೆ ಧಮ್ಕಿ ಹಾಕಿದ್ದಾನೆ “ಆರೋಪಿಗಳು ನಿಲ್ಲಿಸಿದ ನಂತರ, ಇಬ್ಬರೂ ಹೊರಬಂದು ಮೆಟ್ರೋ ಕ್ಯಾಶ್ ಮತ್ತು ಕ್ಯಾರಿ ಪಕ್ಕದ ಓರಿಯನ್ ಮಾಲ್ ತಿರುವಿನ ಕಡೆಗೆ ಓಡಿದರು. ಮುಂದೆ ಓಡಲು ಸಾಧ್ಯವಾಗದ ಅಮೋದ್ ಸಹಾಯಕ್ಕಾಗಿ ಕಿರುಚುತ್ತಾ ಕುಸಿದು ಬಿದ್ದಿದ್ದಾನೆ .

RELATED ARTICLES

LEAVE A REPLY

Please enter your comment!
Please enter your name here

Most Popular