Saturday, July 25, 2026
Homeಜಿಲ್ಲೆಬೆಂಗಳೂರು : ಸುಳ್ಯದ ವಿವಾಹಿತ ಮಹಿಳೆ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣು.

ಬೆಂಗಳೂರು : ಸುಳ್ಯದ ವಿವಾಹಿತ ಮಹಿಳೆ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣು.

ಬೆಂಗಳೂರು : ಸುಳ್ಯದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ.

ಮೃತರನ್ನು ರಾಜೇಶ್ ಅವರ ಪತ್ನಿ ಐಶ್ವರ್ಯ (26) ಎಂದು ಗುರುತಿಸಲಾಗಿದೆ. ಕನಕಮಜದ ಕಪಿಲ ನಿವಾಸಿ, ಐಸ್ ಕ್ರೀಮ್ ವ್ಯಾಪಾರ ಮಾಡುತ್ತಿದ್ದ ಗಿರಿಯಪ್ಪ ಗೌಡ ಅವರ ಸೊಸೆಯಾಗಿದ್ದರು.

ರಾಜೇಶ್ ಎಂಬುವವರ ಪತ್ನಿ ಐಶ್ವರ್ಯ(26) ಮೃತ ದುರ್ದೈವಿ. ಐಶ್ವರ್ಯಾ ಅವರ ಪತಿ ರಾಜೇಶ್ ಡೈರಿ ರಿಚ್ ಐಸ್ ಕ್ರೀಮ್ ಕಂಪನಿಯ ಮಾಲೀಕ ಗಿರಿಯಪ್ಪ ಗೌಡ ಅವರ ಮಗ.

ಉಬೇರಡ್ಕ ಮಿತ್ತೂರು ಗ್ರಾಮದ ಮಡುವೆಗದ್ದೆ ನಿವಾಸಿಗಳಾದ ಸುಬ್ರಹ್ಮಣ್ಯ ಗೌಡ ಮತ್ತು ಉಷಾ ದಂಪತಿಯ ಪುತ್ರಿ ಐಶ್ವರ್ಯ ನಾಲ್ಕು ವರ್ಷಗಳ ಹಿಂದೆ ರಾಜೇಶ್ ಎಂಬುವರೊಂದಿಗೆ ವಿವಾಹವಾಗಿದ್ದರು.

ಐಶ್ವರ್ಯಾ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾಜೇಶ್ ಸ್ವಂತ ಐಸ್ ಕ್ರೀಂ ಪಾರ್ಲರ್ ನಡೆಸುತ್ತಿದ್ದ. ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿದ್ದರು.

ಐಶ್ವರ್ಯಾ ಅವರ ಪೋಷಕರು ಬೆಂಗಳೂರಿನಲ್ಲಿ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಐಶ್ವರ್ಯಾ ತನ್ನ ಪೋಷಕರ ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular