ಬೆಂಗಳೂರು : ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಕಿ / ಖಾಕಿ ವಾರ್ ಶುರುವಾಗಿದೆ.ಐಪಿಎಸ್ ಅಧಿಕಾರಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ದೂರು ನೀಡಲಾಗಿದೆ .ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಡಿಜಿಪಿ ಗೆ ಎಸ್.ಪಿ ದೂರು ನೀಡಿದ್ದಾರೆ.ಈ ಬಗ್ಗೆ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಕರ್ಮಾ ಕಂಡ ಬಯಲು ಮಾಡುತ್ತೆಂದೆಂದು ಎಸ್.ಪಿ ಕಾಶೀನಾಥ್ ಹೇಳಿದ್ದಾರೆ,ಡಿಜಿಪಿ ಸಲೀಂ ಗೆ ಪತ್ರ ಬರೆದು ಭೇಟಿಗಾಗಿ ಸಮಯ ಕೇಳಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಈ ಬೆಳವಣಿಗೆ ಸಂಚಲನ ಉಂಟುಮಾಡಿದ್ದು ಪತ್ರದಲ್ಲಿ ಮಾನಸಿಕ ಕಿರುಕುಳ ಹಾಗೂ ತಾರತಮ್ಯ ಆರೋಪ ಎಂದು ದೂರಿದ್ದಾರೆ.ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಹೇಳಿದಂತೆ ಕೆಲಸ ಮಾಡಬೇಕು ಇಲ್ಲದಿದ್ದರೆ ಮೆಮೊ ಕೊಟ್ಟು ಮಾನಸಿಕ ಹಿಂಸೆ ಕೊಡುತ್ತಾರೆಂದು ಎಸ್.ಪಿ ದೂರಿದ್ದಾರೆ.ಕರ್ನಾಟಕ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿ ಪ್ರತಿನಿತ್ಯ ಟಾರ್ಚರ್ ಕೊಡುತ್ತಿದ್ದಾರೆಂದು ದೂರಿನಲ್ಲಿ ಆರೋಪಿಸಿದ್ದಾರೆ.
ನಾನು ಹಲವು ಬಾರಿ ಅನ್ಯಾಯದ ವಿರುದ್ಧ ಲಿಖಿತವಾಗಿ ದೂರು ಕೊಟ್ಟಿದ್ದೇನೆ ಈ ಬಗ್ಗೆ ಸಿ.ಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರ ಗಮನಕ್ಕೆ ತರಬೇಕು ಒಂದು ವಾರದ ಒಳಗೆ ಭೇಟಿಗೆ ಅವಕಾಶ ನೀಡಬೇಕೆಂದು ಡಿಜಿಪಿ ಗೆ ಎಸ್.ಪಿ ಕಾಶೀನಾಥ್ ರವರು ಪತ್ರ ಬರೆದಿದ್ದಾರೆ.ಅಂದ್ರ ಮೂಲದ ಐಪಿಎಸ್ ಅಧಿಕಾರಿ ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾರೆ.


