Thursday, July 23, 2026
Homeದೇಶಬೆಂಗಳೂರು : ಮಾಲ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ – ಆರೋಪಿ ಪತ್ತೆ.

ಬೆಂಗಳೂರು : ಮಾಲ್‌ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಪ್ರಕರಣ – ಆರೋಪಿ ಪತ್ತೆ.

ಬೆಂಗಳೂರು : ನಗರದ ಮಾಲ್‌ವೊಂದರಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ಬಸವೇಶ್ವರ ನಗರದ ನಿವಾಸಿ ಅಶ್ವಥ್ ನಾರಾಯಣ (60) ಎಂದು ಗುರುತಿಸಲಾಗಿದೆ. ಆದರೆ, ಆತ ತನ್ನ ನಿವಾಸದಿಂದ ಪರಾರಿಯಾಗಿದ್ದಾನೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆರೋಪಿಯನ್ನು ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಲ್‌ನ ಮ್ಯಾನೇಜರ್ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಗಳು ಪ್ರತಿಷ್ಠಿತ ಮಠದಿಂದ ನಿರ್ವಹಿಸಲ್ಪಡುತ್ತಿದ್ದ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡಿ ಎಂಟು ತಿಂಗಳ ಹಿಂದೆಯಷ್ಟೇ ನಿವೃತ್ತರಾಗಿದ್ದರು ಎನ್ನಲಾಗಿದೆ.

ಮನೆ ಬೀಗ ಹಾಕಿ ಪರಾರಿಯಾಗಿರುವ ಅಶ್ವಥ್ ಗಾಗಿ ಮಾಗಡಿ ಪೊಲೀಸರು ಶೋಧ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular