Thursday, July 23, 2026
Homeರಾಜ್ಯಬೆಂಗಳೂರು : ಪ್ರಿಯತಮನ ಜೊತೆ ಶೋಕಿ ಮಾಡಲು ಮನೆ ಮಾಲಕಿಯ ಚಿನ್ನ ಕದ್ದು ಕೊಲೆ ಮಾಡಿದ...

ಬೆಂಗಳೂರು : ಪ್ರಿಯತಮನ ಜೊತೆ ಶೋಕಿ ಮಾಡಲು ಮನೆ ಮಾಲಕಿಯ ಚಿನ್ನ ಕದ್ದು ಕೊಲೆ ಮಾಡಿದ ಯುವತಿಯ ಬಂಧನ.

ಬೆಂಗಳೂರು : ಈ ಪ್ರಪಂಚದಲ್ಲಿ ಮನುಷ್ಯನ ಜೀವಕ್ಕೆ ಬೆಲೆ ಇಲ್ಲದಂತಾಗಿದೆ.ಎಲ್ಲೆಲ್ಲೂ ನೋಡಿದರೂ ಕೊಲೆ ಸುಲಿಗೆ ಯಾ ಸುದ್ದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ವಿಪರ್ಯಾಸ. ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ.ಮಾಡಿಕೊಂಡ ಸಾಲ ತೀರಿಸಲು, ಶೋಕಿ ಜೀವನ ನಡೆಸಲು ಹಾಗೂ ಪ್ರಿಯತಮನ ಜೊತೆ ಮಜಾ ಉಡಾಯಿಸಲು ಯುವತಿಯೊಬ್ಬಳು ತಾನು ಬಾಡಿಗೆಗೆ ಇದ್ದ ಮನೆಯ ಮಾಲಕಿಯನ್ನೇ ಕೊಲೆ ಮಾಡಿದ್ದಾಳೆ. ಮಾಲಕಿ ಕೊರಳಲ್ಲಿ ಧರಿಸಿದ್ದ ಚಿನ್ನದ ಸರದ ಆಕರ್ಷಣೆ ಕೊಲೆಗೆ ಮೂಲವಾಗಿದೆ.

ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಗೃಹಿಣಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಮೇ 10ರಂದು ಕೆಂಗೇರಿ ಠಾಣೆ ವ್ಯಾಪ್ತಿಯ ಕೋನಸಂದ್ರದಲ್ಲಿ ಘಟನೆ ನಡೆದಿತ್ತು. ದಿವ್ಯಾ ಕೊಲೆಯಾದ ಮಹಿಳೆ. ಮೋನಿಕಾ (24) ಬಂಧಿತ ಆರೋಪಿ. ಶೋಕಿ ಜೀವನಕ್ಕಾಗಿ ಮನೆ ಮಾಲಕಿಯನ್ನೆ ಹತ್ಯೆ ಮಾಡಿದ ದಿವ್ಯಾಳನ್ನು ಬಂಧಿಸಲಾಗಿದೆ.

ಮೋನಿಕಾ ಸಾಲ ತೀರಿಸಲು ಹಾಗೂ ಶೋಕಿ ಜೀವನ ನಡೆಸಲು ವಾಸವಿದ್ದ ಮನೆ ಮಾಲಕಿಯ ಹತ್ಯೆ ಮಾಡಿದ್ದಳು. ಕಂಪೆನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡಿದ್ದ ಮೋನಿಕ, ಮೂಲತಃ ಕೋಲಾರ ಜಿಲ್ಲೆಯವಳು. ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು.

ಗುರುಮೂರ್ತಿ ಎಂಬುವವರ ಮನೆಯಲ್ಲಿ ಮೂರು ತಿಂಗಳ ಹಿಂದಷ್ಟೇ ಬಾಡಿಗೆಗೆ ಬಂದಿದ್ದಳು. ಪ್ರಿಯಕರನನ್ನ ಗಂಡ ಎಂದು ಹೇಳಿ ಬಾಡಿಗೆ ಮನೆ ಗಿಟ್ಟಿಸಿಕೊಂಡಿದ್ದಳು. ಆದರೆ ಒಂಬಂಟಿಯಾಗಿ ವಾಸವಿದ್ದ ಮೋನಿಕ ಮನೆಗೆ ಪ್ರಿಯಕರ ಆಗಾಗ ಬಂದು ಹೋಗುತ್ತಿದ್ದ.

ಅತ್ತ ಮೋನಿಕ ಶೋಕಿಗಾಗಿ ವಿಪರೀತ ಕೈಸಾಲ ಮಾಡಿಕೊಂಡಿದ್ದಳು. ಜೊತೆಗೆ ಪ್ರಿಯಕರನಿಗೆ ಟಾಟಾ ಎಸ್ ವಾಹನ ಖರೀದಿಸಲು ಹಣ ಬೇಕಾಗಿತ್ತು. ಹೀಗಾಗಿ ಮನೆ ಮಾಲಕಿ ದಿವ್ಯಾ ಮೈಮೇಲಿದ್ದ ಚಿನ್ನದ ಒಡವೆ ಮೇಲೆ ಮೋನಿಕ ಕಣ್ಣು ಬಿದ್ದಿತ್ತು.ಇದನ್ನು ಗಮನಿಸಿ ಸ್ಕೆಚ್‌ ಹಾಕಿದ ಮೋನಿಕಾ, ಯಾರೂ ಇಲ್ಲದ ಸಮಯ ನೋಡಿ ಹಿಂಬದಿಯಿಂದ ಬಂದು ದಿವ್ಯಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ. ನಂತರ ಕುತ್ತಿಗೆಯಲ್ಲಿದ್ದ 36 ಗ್ರಾಂ ಚಿನ್ನದ ಸರವನ್ನು ತೆಗೆದುಕೊಂಡು ಪರಾರಿಯಾಗಿದ್ದಳು. ಸದ್ಯ ಪ್ರಕರಣ ದಾಖಲಿಸಿ ಮೋನಿಕಾಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular