ಬೆಂಗಳೂರು : ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಸರ್ಕಾರ ಸಜ್ಜಾಗಿದೆ. ಸ್ಟೇಟ್ ಎಜುಕೇಶನ್ ಪಾಲಿಸಿ (Karnataka) ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ, ರಾಜ್ಯ ಶಿಕ್ಷಣ ನೀತಿ ಆಯೋಗದ ಅಂತಿಮ ವರದಿಗೆ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ. ಈ ನೀತಿ ಮುಂದಿನ 2026–27 ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಬಹುದು.
ಹೊಸ ಶಿಕ್ಷಣ ರಚನೆ : 2+8+4 ಮಾದರಿ ಈ ರೀತಿ ಇದ್ದು 2 ವರ್ಷ ಪೂರ್ವ ಪ್ರಾಥಮಿಕ ಶಿಕ್ಷಣ 8 ವರ್ಷ ಪ್ರಾಥಮಿಕ ಶಿಕ್ಷಣ (1ರಿಂದ 8ನೇ ತರಗತಿ) 4 ವರ್ಷ ಪ್ರೌಢಶಿಕ್ಷಣ (9ರಿಂದ 12ನೇ ತರಗತಿ) ಮಾದರಿ ಬದಲಾವಣೆಯಾಗಲಿದೆ. ಇದರಿಂದ 8ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣವಾಗಲಿದ್ದು 12ನೇ ತರಗತಿವರೆಗೆ ಹೈಸ್ಕೂಲ್ ಎಂಬ ಹೊಸ ವ್ಯವಸ್ಥೆ ಜಾರಿಯಾಗುವ ಸಾಧ್ಯತೆ ಇದೆ.
1ನೇ ತರಗತಿಗೆ ಪ್ರವೇಶಕ್ಕೆ 6 ವರ್ಷ ವಯಸ್ಸು ನಿಗದಿಯಾದಲ್ಲಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ 12ನೇ ತರಗತಿವರೆಗೆ ಶಿಕ್ಷಣದ ಅವಕಾಶ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುವ ಯೋಜನೆ ಅತಿಥಿ ಶಿಕ್ಷಕರ ಬದಲು ಶಾಶ್ವತ ಶಿಕ್ಷಕರ ನೇಮಕ ವಲಸೆ ಕಾರ್ಮಿಕರ ಮಕ್ಕಳಿಗೆ ವಸತಿ ಶಾಲೆಗಳ ಸ್ಥಾಪನೆಯಾಗಲಿದೆ.
ಉನ್ನತ ಶಿಕ್ಷಣದಲ್ಲಿ ಬದಲಾವಣೆಯಾಗಲಿದ್ದು 3+2 (Degree + PG) ಹಳೆಯ ಪದ್ಧತಿಗೆ ಮರಳುವ ಸಾಧ್ಯತೆವಿದೆ.ಇದರ ಜೊತೆ 4 ವರ್ಷಗಳ ಪದವಿ ಕೋರ್ಸ್ ರದ್ದು ಮಾಡುವ ಪ್ರಸ್ತಾಪ ಕೂಡ ಇದೆ.ಕೇಂದ್ರದ National Education Policy (India) ಅನ್ನು ಹಿಂಪಡೆದು ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ರೂಪಿಸುವ ದಿಸೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಸಚಿವ ಸಂಪುಟ ಸಭೆಯ ನಿರ್ಧಾರದ ನಂತರ ಅಧಿಕೃತ ಘೋಷಣೆ ನಿರೀಕ್ಷೆಯಿದ್ದು, ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗೆ ಇದು ದಾರಿ ಮಾಡಿಕೊಡಲಿದೆ.


