Friday, April 24, 2026
Flats for sale
Homeರಾಜ್ಯಬೀದರ್ : ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಯುವ ರೈತರು...

ಬೀದರ್ : ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಯುವ ರೈತರು ದಾರುಣ ಸಾವು.

ಬೀದರ್ : ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಯುವಕರು ದಾರುಣ ಸಾವನಪ್ಪಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದಲ್ಲಿ ನಡೆದಿದೆ.

ನಾವದಗಿ ಗ್ರಾಮದ ರೇವಣಸಿದ್ದ (28 ) ಮತ್ತು ಜವರ್ಗಿಯ ಯಲ್ಲಾಲಿಂಗ (28 ) ಸಿಡಿಲಿಗೆ ಬಲಿಯಾದ ಮೃತ ದುರ್ದೈವಿ ಯುವಕರು.

ಇಬ್ಬರ ಯುವಕರು ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಮಳೆ ಬಂದ ಕಾರಣ ಜಮೀನಿನಲ್ಲಿದ್ದ ಮಾವಿನ ಮರದ ಕಳಗಡೆ ಬಂದು ನಿಂತಿದ್ದರು ಈ ವೇಳೆ ಮಾವಿನ ಮರಕ್ಕೆ ಸಿಡಿಲು ಜೋರಾಗಿ ಅಪ್ಪಳಿಸಿದ್ದು ಇಬ್ಬರು ಯುವ ರೈತರು ಸ್ಥಳದಲ್ಲೇ ಸಾವನಪ್ಪಿದ್ದಾರೆ.ಖಟಕ್ ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಖಟಕ್ ಚಿಂಚೋಳಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular