ಪುತ್ತೂರು : ಹೊಳೆಗೆ ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಉಕ್ಕಿ ಹರಿಯುತ್ತಿದ್ದ ನೀರಿನಲ್ಲೇ ಈಜಿ ತೆರಳಿ ಮರುಜೋಡಿಸಿದ ಮೆಸ್ಕಾಂ ಲೈನ್‌ಮ್ಯಾನ್ ಸಾಹಸಮಯ ಕರ್ತವ್ಯ ಪ್ರದರ್ಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ಧೂಮಡ್ಕ ಎಂಬಲ್ಲಿ ಈ ಘಟನೆ ನಡೆದಿದೆ. ಧೂಮಡ್ಕದಲ್ಲಿ ಹಾದುಹೋಗುವ ಸೀರೆ ಹೊಳೆಗೆ ವಿದ್ಯುತ್ ತಂತಿ ಕಡಿದು ಬಿದ್ದಿತ್ತು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬೆಟ್ಟಂಪಾಡಿ ಮೆಸ್ಕಾಂ ಸಿಬ್ಬಂದಿ ಬಂದೇ ನವಾಜ್ ಅವರು, ಉಕ್ಕಿ ಹರಿಯುತ್ತಿದ್ದ ಸೀರೆ ಹೊಳೆಗೆ ಇಳಿದು ಈಜುತ್ತಾ ತೆರಳಿ ವಿದ್ಯುತ್ ತಂತಿಯನ್ನು ಮರುಜೋಡಿಸಿದ್ದಾರೆ.
ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಲೈನ್‌ಮ್ಯಾನ್ ಅವರ ಸಾಹಸಮಯ ಕಾರ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಳೆಯ ನಡುವೆ ವಿದ್ಯುತ್ ಸಂಪರ್ಕವನ್ನು ಸುರಕ್ಷಿತವಾಗಿ ಮರುಸ್ಥಾಪಿಸಲು ಮೆಸ್ಕಾಂ ಸಿಬ್ಬಂದಿ ಕೈಗೊಂಡ ಈ ಕಾರ್ಯ ಇದೀಗ ಗಮನ ಸೆಳೆದಿದೆ.

