Tuesday, July 21, 2026
Homeದೇಶನಾಗ್ಪುರ : ಹಳಿ ತಪ್ಪಿದ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲು,ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು, ಸ್ಥಳಕ್ಕೆ ರಕ್ಷಣಾ...

ನಾಗ್ಪುರ : ಹಳಿ ತಪ್ಪಿದ ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ರೈಲು,ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು, ಸ್ಥಳಕ್ಕೆ ರಕ್ಷಣಾ ತಂಡಗಳ ದೌಡು!

ನಾಗ್ಪುರ : ಮಹಾರಾಷ್ಟ್ರದ ನಾಗ್ಪುರದಲ್ಲಿ ಲೋಕಮಾನ್ಯ ತಿಲಕ್-ಶಾಲಿಮಾರ್ ಎಕ್ಸ್‌ಪ್ರೆಸ್‌ನ ಮೂರು ಬೋಗಿಗಳು ಹಳಿತಪ್ಪಿವೆ. ಮಂಗಳವಾರ. ಸುಭಾಷ್ ಚಂದ್ರ ಬೋಸ್ ರೈಲು ನಿಲ್ದಾಣದ ಬಳಿ ರೈಲು ಹಳಿತಪ್ಪಿದೆ. ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಬಂದ ರೈಲು, ಶಾಲಿಮಾರ್‌ಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ವರದಿಗಳ ಪ್ರಕಾರ, ರೈಲಿನ ಎಸ್ 1 ಮತ್ತು ಎಸ್ 2 ಬೋಗಿಗಳು ಮತ್ತು ಗೂಡ್ಸ್ ಕೋಚ್ ಹಳಿತಪ್ಪಿವೆ.

ಮುಂಬೈನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಥಾಣೆ ಜಿಲ್ಲೆಯ ಕಲ್ಯಾಣ್ ನಿಲ್ದಾಣದಲ್ಲಿ ಉಪನಗರ ರೈಲು ಹಳಿತಪ್ಪಿದ ದಿನಗಳ ನಂತರ ಶಾಲಿಮಾರ್ ಎಕ್ಸ್‌ಪ್ರೆಸ್ ಹಳಿತಪ್ಪಿತು. ರೈಲು ನಿಲ್ದಾಣ ಪ್ರವೇಶಿಸಲು ಮುಂದಾದಾಗ ಈ ಘಟನೆ ನಡೆದಿದೆ. ರೈಲು ಪ್ಲಾಟ್‌ಫಾರ್ಮ್‌ನಲ್ಲಿ ನಿಲ್ಲುವ ಹಂತದಲ್ಲಿದ್ದ ಕಾರಣ, ಅದು ನಿಧಾನ ವೇಗದಲ್ಲಿ ಚಲಿಸುತ್ತಿತ್ತು. ಹೀಗಾಗಿ ಯಾವುದೇ ತೀವ್ರ ಹಾನಿ ಸಂಭವಿಸಿಲ್ಲ ಎಂದು ಮಾಹಿತಿ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular