Thursday, March 12, 2026
Flats for sale
Homeವಿದೇಶನವದೆಹಲಿ : ಯೆಮೆನ್ ಪ್ರಜೆ ಹತ್ಯೆ ಆರೋಪ : ಕೇರಳ ಮೂಲದ ನಿಮಿಷಾಗೆ ಗಲ್ಲು ಶಿಕ್ಷೆ..!

ನವದೆಹಲಿ : ಯೆಮೆನ್ ಪ್ರಜೆ ಹತ್ಯೆ ಆರೋಪ : ಕೇರಳ ಮೂಲದ ನಿಮಿಷಾಗೆ ಗಲ್ಲು ಶಿಕ್ಷೆ..!

ನವದೆಹಲಿ : ಯೆಮನ್ ಪ್ರಜೆ ಹತ್ಯೆ ಪ್ರಕರಣದಲ್ಲಿ ಕೇರಳ ಮೂಲದ ನರ್ಸ್ ನಿಮಿಷ ಪ್ರಿಯಾ ಎಂಬುವವರಿಗೆ ವಿಧಿಸಲಾಗಿರುವ ಮರಣದಂಡನೆ ಆದೇಶಕ್ಕೆ ಅಲ್ಲಿನ ಅಧ್ಯಕ್ಷ ರಶಾದ್ ಅಲ್ ಅಮಿ ಸಹಿಹಾಕಿದ್ದಾರೆ.

2017 ರಿಂದ ಯೆಮನ್ ಜೈಲಿ ನಲ್ಲಿರುವ ನಿಮಿಷ ಈಗ ಮರಣದಂಡನೆ ಎದುರಿ ಸುವಂತಾಗಿದೆ. ಇನ್ನು ಒಂದು ತಿಂಗಳ ಅವಧಿಯಲ್ಲಿ ಮರಣದಂಡನೆ ಜಾರಿಯಾಗಲಿದೆ.

ಈ ಪ್ರಕರಣದಲ್ಲಿ ಮಿಮಿಷ ಗೆ ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡುವುದಾಗಿ ಭಾರತದ ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ‘ಯೆಮೆನ್‌ನಲ್ಲಿ ನಿಮಿಷಾಗೆ ಮರಣ ದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ ಕುರಿತು ನಮ್ಮ ಅರಿವಿಗೆ ಬಂದಿದೆ. ಅವಳ ಕುಟುಂಬಕ್ಕೆ ಸರ್ಕಾರವು ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ನೀಡಲಿದೆ ಎಂದು ವಿದೇಶ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಯೆಮೆನ್ ಪ್ರಜೆಯನ್ನು ಹತ್ಯೆ ಮಾಡಿದ ಆರೋಪದಲ್ಲಿನಿಮಿಷಾ ಪ್ರಿಯಾ, ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular