Saturday, July 18, 2026
Homeಜಿಲ್ಲೆಧರ್ಮಸ್ಥಳ : ಧರ್ಮಸ್ಥಳಕ್ಕೆ ಯಾತ್ರೆಗೆ ಬಂದಿದ್ದ 70 ವರ್ಷದ ವೃದ್ಧೆಗೆ ಪ್ರಜ್ಞೆ ತಪ್ಪುವ ಔಷಧಿ ನೀಡಿ...

ಧರ್ಮಸ್ಥಳ : ಧರ್ಮಸ್ಥಳಕ್ಕೆ ಯಾತ್ರೆಗೆ ಬಂದಿದ್ದ 70 ವರ್ಷದ ವೃದ್ಧೆಗೆ ಪ್ರಜ್ಞೆ ತಪ್ಪುವ ಔಷಧಿ ನೀಡಿ 10 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ.

ಧರ್ಮಸ್ಥಳ : ಧರ್ಮಸ್ಥಳಕ್ಕೆ ಯಾತ್ರೆಗೆ ಬಂದಿದ್ದ 70 ವರ್ಷದ ವೃದ್ಧೆಯೊಬ್ಬರಿಗೆ ಪ್ರಜ್ಞೆ ತಪ್ಪುವ ಔಷಧಿ ನೀಡಿ ಚಿನ್ನಾಭರಣ ದರೋಡೆ ಮಾಡಿದ ಘಟನೆ ನಡೆದಿದೆ.

ಬೆಂಗಳೂರು ಬನ್ನೇರುಘಟ್ಟ ಮೂಲದ ಪ್ರೇಮ.ಕೆ ಮೋಸಕ್ಕೊಳಗಾದ ವೃದ್ಧೆ. ಅಪರಿಚಿತ ವ್ಯಕ್ತಿಯೊಬ್ಬ ಪ್ರಸಾದ ಮತ್ತು ಜ್ಯೂಸ್ ನೀಡಿ ಪರಿಚಯ ಬೆಳೆಸಿ ಬಳಿಕ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ 112 ಗ್ರಾಂ ಚಿನ್ನಾಭರಣ ಹಾಗೂ ₹7 ಸಾವಿರ ನಗದು ಕಳವಾಗಿದ್ದು, ಒಟ್ಟು ಸುಮಾರು ₹10 ಲಕ್ಷ ಮೌಲ್ಯದ ನಷ್ಟ ಸಂಭವಿಸಿದೆ.

ದೇವಸ್ಥಾನದ ಮುಖ್ಯ ದ್ವಾರದ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು, ಅಸ್ವಸ್ಥಗೊಂಡಿದ್ದ ವೃದ್ಧೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಸಂಬಂಧ Dharmasthala Police Station ನಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಯಾತ್ರಾರ್ಥಿಗಳು ಅಪರಿಚಿತರಿಂದ ಆಹಾರ ಮತ್ತು ಪಾನೀಯ ಸ್ವೀಕರಿಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular