Thursday, July 23, 2026
Homeರಾಜ್ಯತೀರ್ಥಹಳ್ಳಿ : ಪ್ರೀತಿಸಿ ಮದುವೆಯಾದ 8 ತಿಂಗಳಿಗೆ ನೇಣಿಗೆ ಶರಣಾದ ಯುವತಿ.

ತೀರ್ಥಹಳ್ಳಿ : ಪ್ರೀತಿಸಿ ಮದುವೆಯಾದ 8 ತಿಂಗಳಿಗೆ ನೇಣಿಗೆ ಶರಣಾದ ಯುವತಿ.

ತೀರ್ಥಹಳ್ಳಿ : ಪ್ರೀತಿಸಿ ಮದುವೆಯಾದ ಯುವತಿ ಮಾನಸಿಕ ಖಿನ್ನತೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ನಾಲೂರು ಕೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ನಡೆದಿದೆ. ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 25 ವರ್ಷ ವಯಸ್ಸಿನ ಶಮಿತಾ ಎಂಬ ಹೆಣ್ಣುಮಗಳು ಮದುವೆಯಾಗಿ 8 ತಿಂಗಳಿಗೆ, ಯುವತಿಯು ಗಂಡನ ಮನೆಯಲ್ಲಿ ಡೆತ್ ನೋಟ್ ಬೆರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನೆ ನಡೆದಿರುವುದು ಮಂಗಳವಾರ ಮಧ್ಯರಾತ್ರಿ. ಸುಮಾರು 12 ರಿಂದ ಒಂದು ಘಂಟೆ ನಡುವೆ. ಆ ದಿನ ಪತಿ ವಿದ್ಯಾರ್ಥ್ ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ತೆರಳಿದ್ದನು. ಮಂಗಳವಾರ ರಾತ್ರಿ ಅತ್ತೆ ಮಾವನಿಗೆ ತಿಳಿಸಿ ಶಮಿತಾ ರಾತ್ರಿ ಊಟ ಮಾಡಿ ಮಲಗಲು ಉಪ್ಪರಿಗೆ ಮೇಲೆ ತೆರಳಿದ್ದರು. ಆದರೆ ಬುಧವಾರ ಬೆಳಿಗ್ಗೆ ಬಾಗಿಲು ತೆರೆಯದಿದ್ದ ಹಿನ್ನೆಲೆಯಲ್ಲಿ ಕುಟುಂಬದವರು, ಕೆಲಸದವರು ಕಿಟಕಿಯಿಂದ ನೋಡಿದಾಗ ಶಮಿತಾ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ.

10 ವರ್ಷಗಳಿಂದ ಪ್ರೀತಿಸಿ ಲವ್ ಮ್ಯಾರೇಜ್ ಆಗಿದ್ದರು. ಸುಂದರ ಯುವತಿಯ ಹಿಂದೆ ಬೆನ್ನುಬಿದ್ದು ಲವ್ ಮಾಡಿ ಪೋಷಕರ ಮನಸ್ಸು ಗೆದ್ದು ಅರೇಂಜ್ ಮ್ಯಾರೇಜ್ ಆಗಿದ್ದ ಪ್ರಿಯಕರ. ಪ್ರೀತಿಸಿದ ಯುವತಿಯನ್ನು ಮದುವೆಯಾಗಿದ್ದು ಆತನಿಗೆ ಸ್ವರ್ಗವೇ ಸಿಕ್ಕಂತಾಗಿತ್ತು. ಯಾವುದೇ ಚಿತ್ರನಟಿಗೆ ಕಮ್ಮಿಯಿಲ್ಲದಂತೆ ಇದ್ದ ಸುಂದರವಾಗಿರುವ ಪತ್ನಿ ಈಗ ಸಾವಿನ ಮನೆ ಸೇರಿದ್ದಾಳೆ.

ಗಂಡ ಪ್ರೀತಿಯಿಂದ ನೋಡುತಿದ್ದು ಆಕೆಗಿನ್ನೂ 25 ವರ್ಷ ಮಾತ್ರ. ಪದವೀಧರೆ. ತುಂಬಾ ಬೋಲ್ಡ್ ಆಗಿದ್ದವಳು. ಇಂತಹ ಯುವತಿಯ ಮುಂದೆ ದೊಡ್ಡ ಪ್ರಪಂಚವೇ ಇತ್ತು. ಆದ್ರೆ ಕೇವಲ ಥೈರಾಡ್ಡ್, ಒಂಟಿತನ ಮತ್ತು ಮಕ್ಕಳು ಆಗುವುದಿಲ್ಲ ಎನ್ನುವ ಭಯಕ್ಕೆ ನವ ಗೃಹಣಿ ಸಾವಿನ ಮನೆ ಸೇರಿದ್ದು ವಿಪರ್ಯಾಸ.

RELATED ARTICLES

LEAVE A REPLY

Please enter your comment!
Please enter your name here

Most Popular