Tuesday, October 21, 2025
Flats for sale
Homeವಿದೇಶಜೆರಾಸೆಲಂ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹತ್ಯೆಗೆ ಇರಾನ್ ಸಂಚು ..!

ಜೆರಾಸೆಲಂ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹತ್ಯೆಗೆ ಇರಾನ್ ಸಂಚು ..!

ಜೆರಾಸೆಲಂ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹತ್ಯೆ ಮಾಡಲು ನಡೆದ ಪ್ರಯತ್ನಕ್ಕೆ ಕೈಹಾಕಿರುವುದು ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿ ಹತ್ಯೆ ಮಾಡಲು
ಕಾನೂನುಸಮ್ಮತಿ ನೀಡಿದಂತಾಗಿದೆ ಎಂದು ಇಸ್ರೇಲ್ ಗುಪ್ತಚರ ಸಂಸ್ಥೆ ಹೇಳಿದೆ.

ಇಸ್ರೇಲ್ ಕರಾವಳಿಯ ಕೆಸರಿಯಾ ನಗರದಲ್ಲಿರುವ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆ ಡ್ರೋನ್ ದಾಳಿ ನಡೆದಿತ್ತು. ಇದರ ಬೆನ್ನಲ್ಲೇ ಇಸ್ರೇಲ್‌ನ ಗುಪ್ತಚರ ಮತ್ತು ವಿಶೇಷ ಕಾರ್ಯಾಚರಣೆಗಳ ಸಂಸ್ಥೆ ಮೊಸ್ಸಾದ್ ಈ ಮಾಹಿತಿ ನೀಡಿದೆ.

‘ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹತ್ಯೆಗೆ ನಡೆದಿರುವ ಯತ್ನವು ಖಮೇನಿಯನ್ನು ಹೊಡೆದು ಹಾಕಲು ಸಂಪೂರ್ಣ ಕಾನೂನುಸಮ್ಮತಿ ನೀಡಿದೆ’ ಎಂದು ಟ್ವೀಟ್ ಮಾಡುವ ಮೂಲಕ ಇರಾನ್‌ಗೆ ಎಚ್ಚರಿಕೆ ನೀಡಿದೆ.

ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಂಘಟನೆ ನೆತನ್ಯಾಹು ಹತ್ಯೆಗೆ ಯತ್ನಿಸಿದೆ ಎನ್ನಲಾಗಿದೆ. ಆದರೆ, ಹಿಜ್ಬುಲ್ಲಾ ಅಥವಾ ಕಳೆದ ವರ್ಷ ಇಸ್ರೇಲ್ ಮೇಲೆ ದಾಳಿ ಮಾಡಿದ್ದ ಹಮಾಸ್ ಸಂಘಟನೆ ಈವರೆಗೆ ಹೊಣೆ ಹೊತ್ತುಕೊಂಡಿಲ್ಲ. ದಾಳಿ ನಡೆದಿರುವುದನ್ನು ಖಚಿತಪಡಿಸಿರುವ ಇಸ್ರೇಲ್ ಸೇನೆ, ‘ದಾಳಿ ಆದ ಹೊತ್ತಲ್ಲಿ ಪ್ರಧಾನಿ ಅಥವಾ ಅವರ ಪತ್ನಿ, ನಿವಾಸದಲ್ಲಿ ಇರಲಿಲ್ಲ. ಹಾಗಾಗಿ ಯಾರೊಬ್ಬರೂ ಗಾಯಗೊಂಡಿಲ್ಲ’ ಎಂದಿದೆ .

ತಮ್ಮ ಹತ್ಯೆಗೆ ನಡೆದ ದಾಳಿಗೆ ಪ್ರತಿಕ್ರಿಯಿಸಿರುವ ನೆತನ್ಯಾಹು, ‘ನನ್ನನ್ನು ಹತ್ಯೆಗೈಯಲು ಹಿಜ್ಬುಲ್ಲಾ ಸಂಘಟನೆ ನಡೆಸಿದ ಪ್ರಯತ್ನವು ಘೋರ ತಪ್ಪು ‘ ಎಂದು ಎಚ್ಚರಿಸಿದ್ದಾರೆ. ಇಸ್ರೇಲ್ ಮೇಲೆ ಇರಾನ್ ಸೇನೆ ಕ್ಷಿಪಣಿ ದಾಳಿ ನಡೆಸಿದ್ದನ್ನು ‘ಅತ್ಯುತ್ತಮ ಕಾರ್ಯ’ ಎಂದು ಖಮೇನಿ ಇತ್ತೀಚೆಗೆ ಶ್ಲಾಘಿಸಿದ್ದರು. ‘ಅಗತ್ಯಬಿದ್ದರೆ ಮತ್ತೆ ದಾಳಿ ಮಾಡಲಾಗುವುದು’ ಎಂದು ಹೇಳಿದ್ದಾರೆ. ಇರಾನ್ ರಾಜಧಾನಿಯಲ್ಲಿ ಇದೇ ತಿಂಗಳ ಮೊದಲ ಶುಕ್ರವಾರ ನಡೆದ ಪ್ರಾರ್ಥನೆ ವೇಳೆ 40೦ ನಿಮಿಷ ಪ್ರವಚನ ನೀಡಿದ್ದ ಖಮೇನಿ, ‘ಇರಾನ್ ಮತ್ತು ಅದರ ಮಿತ್ರ ರಾಷ್ಟçಗಳು ಇಸ್ರೇಲ್ ವಿರುದ್ಧದ ಹೋರಾಟವನ್ನು ಮುಂದುವರಿಸಲಿವೆ. ಕ್ಷಿಪಣಿ ದಾಳಿಯ ಮೂಲಕ ಸೇನೆಯು ಈ ಭೂ ವಲಯ ಹಾಗೂ ಇಸ್ಲಾಮಿಕ್ ಜಗತ್ತಿಗೆ ನಿರ್ಣಾಯಕವನ್ನು ಸೇವೆ ಸಲ್ಲಿಸಿದೆ’ ಎಂದು ಹೇಳಿದೆ

RELATED ARTICLES

LEAVE A REPLY

Please enter your comment!
Please enter your name here

Most Popular