Wednesday, March 18, 2026
Flats for sale
Homeರಾಜ್ಯಚಾಮರಾಜನಗರ : ರಾಷ್ಟ್ರಗೀತೆ ಹಾಡುವ ವೇಳೆ ಕುಸಿದುಬಿದ್ದ ಶಾಲಾ ವಿದ್ಯಾರ್ಥಿನಿ ಸಾವು.

ಚಾಮರಾಜನಗರ : ರಾಷ್ಟ್ರಗೀತೆ ಹಾಡುವ ವೇಳೆ ಕುಸಿದುಬಿದ್ದ ಶಾಲಾ ವಿದ್ಯಾರ್ಥಿನಿ ಸಾವು.

ಚಾಮರಾಜನಗರ : ಶಾಮರಾಜನಗರ ಜಿಲ್ಲೆಯ ಶಾಲೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ವಿದ್ಯಾರ್ಥಿನಿಯೊಬ್ಬರು ರಾಷ್ಟ್ರಗೀತೆ ಹಾಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ಬುಧವಾರ ನಡೆದಿದೆ.

ಮೃತ ಬಾಲಕಿಯನ್ನು ನಿರ್ಮಲಾ ಶಾಲೆಯ ವಿದ್ಯಾರ್ಥಿನಿ 15 ವರ್ಷದ ಪೆಲಿಸಾ ಎಂದು ಗುರುತಿಸಲಾಗಿದೆ.ಪೆಲಿಸಾ ಅನಾಥಳಾಗಿದ್ದು, ಹಾಸ್ಟೆಲ್‌ನಲ್ಲಿ ವಾಸವಾಗಿದ್ದಳು.ಬೆಳಗ್ಗೆ ಪ್ರಾರ್ಥನೆ ನಡೆಯುತ್ತಿದ್ದಾಗ ಪೆಲಿಸಾ ಕುಸಿದು ಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು.

ಪ್ರಾಥಮಿಕ ವರದಿಯ ಪ್ರಕಾರ ಹೃದಯಾಘಾತವೆಂದು ತಿಳಿದು ಬಂದಿದೆ,ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಕರಣದ ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.ಶಾಲೆಯ ಆಡಳಿತ ಮಂಡಳಿ ಹಾಗೂ ಆಕೆಯ ಸ್ನೇಹಿತರ ಹೇಳಿಕೆಯನ್ನು ಇನ್ನೂ ದಾಖಲಿಸಿಕೊಳ್ಳಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ತನಿಖೆ ನಡೆಯುತ್ತಿದೆ.



RELATED ARTICLES

LEAVE A REPLY

Please enter your comment!
Please enter your name here

Most Popular