Saturday, July 25, 2026
Homeಜಿಲ್ಲೆಕಾಸರಗೋಡು: 1.5 ತಿಂಗಳ ಹೆಣ್ಣು ಮಗುವನ್ನು ಕೆಸರಿನಲ್ಲಿ ಮುಳುಗಿಸಿ ಕೊಂದ ತಾಯಿ.

ಕಾಸರಗೋಡು: 1.5 ತಿಂಗಳ ಹೆಣ್ಣು ಮಗುವನ್ನು ಕೆಸರಿನಲ್ಲಿ ಮುಳುಗಿಸಿ ಕೊಂದ ತಾಯಿ.

ಕಾಸರಗೋಡು : ಒಂದೂವರೆ ತಿಂಗಳ ಹೆಣ್ಣು ಮಗುವನ್ನು ತಾಯಿ ಕೆಸರಿನ ನೀರಿನಲ್ಲಿ ಮುಳುಗಿಸಿ ಕೊಂದ ದಾರುಣ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಲ್ ಪಚಲಂಪಾರೆ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. .

ಸುಮಂಗಲಿ ಮತ್ತು ಸತ್ಯನಾರಾಯಣ ದಂಪತಿಯ ಒಂದೂವರೆ ತಿಂಗಳ ಮಗು ಬಲಿಯಾದ ದುರ್ದೈವಿ.

ಮಂಗಳವಾರ ಮಧ್ಯಾಹ್ನ ತಾಯಿ ಮತ್ತು ಮಗು ನಾಪತ್ತೆಯಾಗಿದ್ದರಿಂದ ಮನೆಯವರು ಇಬ್ಬರಿಗಾಗಿ ಹುಡುಕಾಟ ಆರಂಭಿಸಿದಾಗ ಮನೆಯಿಂದ ಸ್ವಲ್ಪ ದೂರದಲ್ಲಿ ತಾಯಿ ಪತ್ತೆಯಾಗಿದ್ದು ಮಗು ನಾಪತ್ತೆಯಾಗಿತ್ತು.

ವಿಚಾರಿಸಿದಾಗ ಸಮೀಪದ ಬಯಲಿನಲ್ಲಿ ಕೆಸರಿನ ನೀರಿನಲ್ಲಿ ಮಗುವನ್ನು ಮುಳುಗಿಸಿ ಕೊಂದಿದ್ದಾಳೆ ಎಂದು ಹೇಳಲಾಗಿದೆ.ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆ ಸುಮಂಗಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಿಳೆ ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯಕ್ಕೆ ಬೇರೇನಾದರೂ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular