Saturday, July 25, 2026
Homeಜಿಲ್ಲೆಕಾಸರಗೋಡು : ಮನೆಯ ಮುಂದೆ ಕಾರಿನಡಿಗೆ ಬಿದ್ದು ಮಗು ಸಾವು.

ಕಾಸರಗೋಡು : ಮನೆಯ ಮುಂದೆ ಕಾರಿನಡಿಗೆ ಬಿದ್ದು ಮಗು ಸಾವು.

ಕಾಸರಗೋಡು : 1.5 ವರ್ಷದ ಬಾಲಕ ತನ್ನ ಚಿಕ್ಕಪ್ಪನ ಕಾರಿನ ಚಕ್ರಕ್ಕೆ ಸಿಲುಕಿ ಮನೆಯ ವರಾಂಡದಲ್ಲಿ ಸಾವನ್ನಪ್ಪಿದ್ದ ಘಟನೆ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕಾಸರಗೋಡ್ ಜಿಲ್ಲೆಯ ಉಪ್ಪಳ ಸಮೀಪದ ಸೋಂಕಲ್ ಎಂಬಲ್ಲಿ ಈ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.

ಭಾನುವಾರ ರಾತ್ರಿ ಈ ದಾರುಣ ಘಟನೆ ನಡೆದಿದೆ. ಮೃತನನ್ನು ಸೋಂಕಾಲ್ ಕೊಡಂಗೆ ನಿವಾಸಿ ನಿಸ್ಸಾರ್ ಎಂಬವರ ಪುತ್ರ ಮಸ್ತುಲ್ ಜಿಶಾನ್ ಎಂದು ಗುರುತಿಸಲಾಗಿದೆ.

ಜಿಶಾನ್ ಚಿಕ್ಕಪ್ಪ ಕಾರನ್ನು ಮುಂದಕ್ಕೆ ಚಲಿಸುತ್ತಿದ್ದರು. ಕಾರಿನ ಮುಂದೆ ನಿಂತಿದ್ದ ಜಿಶಾನ್ ಕಣ್ಣಿಗೆ ಕಾಣಲಿಲ್ಲ. ತಕ್ಷಣ ಮಗುವನ್ನು ಸಂಬಂಧಿಕರು ಹಾಗೂ ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟೊತ್ತಿಗಾಗಲೇ ಮಗು ಕೊನೆಯುಸಿರೆಳೆದಿತ್ತು.

ಈ ಸಂಬಂಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular