Thursday, July 23, 2026
Homeಜಿಲ್ಲೆಉಡುಪಿ : ರೈಲಿನಲ್ಲಿ ಮಣಿಪಾಲದ ಯುವತಿಯ ಮೇಲೆ ಮಾನಭಂಗಕ್ಕೆ ಯತ್ನ,ಭಟ್ಕಳ ಮೂಲದ ಕಾಮುಕನ ಬಂಧನ…!!

ಉಡುಪಿ : ರೈಲಿನಲ್ಲಿ ಮಣಿಪಾಲದ ಯುವತಿಯ ಮೇಲೆ ಮಾನಭಂಗಕ್ಕೆ ಯತ್ನ,ಭಟ್ಕಳ ಮೂಲದ ಕಾಮುಕನ ಬಂಧನ…!!

ಉಡುಪಿ : ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶನಿವಾರ ರಾತ್ರಿ ಉಡುಪಿಗೆ ಹೊರಟಿದ್ದ ಮಹಿಳೆ ಭಾನುವಾರ ಮುಂಜಾನೆ ರೈಲು ಸಂಚರಿಸುತ್ತಿದ್ದಾಗಲೇ ಯುವಕನೋರ್ವ ಅಸಭ್ಯ ವರ್ತನೆ ತೋರಿಸಿ ಇನ್ನೇನು ಉಡುಪಿ ಬರಲು ಅರ್ಧ ಗಂಟೆ ಇರುವಾಗ ಮಾನಭಂಗಕ್ಕೆ ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿ ಕಾಮುಕ ಭಟ್ಕಳ ಮೂಲದ ಮೊಹಮ್ಮದ್ ಶುರೈಮ್ (22) ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಯುವತಿ ಮೂಲತಃ ಉಡುಪಿ ತಾಲೂಕಿನ ಮಣಿಪಾಲದವರು. ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಉಡುಪಿಗೆ ಹೊರಟಿದ್ದರು. ಕೂಡಲೇ ಇದಕ್ಕೆ ಯುವತಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಗಾಬರಿಗೊಂಡ ಶುರೈಂ ಕ್ಷಮೆಯಾಚಿಸಿದ್ದಾನೆ.

ಬೆಂಗಳೂರು-ಮುರ್ಡೇಶ್ವರ ನಡುವೆ ಸಂಚರಿಸುವ ಮುರ್ಡೇಶ್ವರ ಎಕ್ಸ್ ಪ್ರೆಸ್ ರೈಲಿನಲ್ಲಿ ಶನಿವಾರ ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸಿದ್ದರು. 3 ಹಂತಗಳಲ್ಲಿ ಶಾರ್ಟ್ ಲಿಸ್ಟ್ ರೆಡಿ ಮಾಡಿ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ. ರೈಲಿನಲ್ಲಿ ಯುವತಿಯ ಮಾನಭಂಗ ಯತ್ನ ನಡೆದಿದ್ದು ಮಾಹಿತಿ ಪಡೆದ 24 ಗಂಟೆಯಲ್ಲೇ ಮಣಿಪಾಲ ಪೊಲೀಸರು ಯುವತಿ ಆತನ ಫೋಟೊ ತೆಗೆದ ಹಿನ್ನೆಲೆ ಪತ್ತೆಹಚ್ಚುವಲ್ಲಿ ಸಫಲರಾಗಿದ್ದಾರೆ. ಜತೆಗೆ ತಪ್ಪಿಸಿಕೊಂಡು ಹೋಗುತ್ತಿದ್ದವನನ್ನು ಸಹ ಪ್ರಯಾಣಿಕರು ಹಿಡಿದುಕೊಂಡಿದ್ದಾರೆ. ರೈಲ್ವೆ ಮದದ್ ಆ್ಯಪ್ ಮೂಲಕವೂ ದೂರು ನೀಡಿದ್ದರು. ಯುವತಿ ಮಾಹಿತಿ ಆಧರಿಸಿ ಕೂಡಲೇ ಮಣಿಪಾಲ ಪೊಲೀಸರುಆರೋಪಿಯನ್ನು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular