ಇಸ್ಲಾಮಾಬಾದ್ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು Pakistan ದೇಶದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ವಾರದ ತೈಲ ಆಮದು ವೆಚ್ಚ ಭಾರೀ ಏರಿಕೆಯಾಗಿದೆ ಎಂದು ಪ್ರಧಾನಿ Shehbaz Sharif ತಿಳಿಸಿದ್ದಾರೆ.
ಬುಧವಾರ ನಡೆದ ಫೆಡರಲ್ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಅವರು, ಯುದ್ಧಕ್ಕೂ ಮುನ್ನ ವಾರದ ತೈಲ ಬಿಲ್ ಸುಮಾರು $300 ಮಿಲಿಯನ್ ಇದ್ದು, ಇದೀಗ ಅದು $800 ಮಿಲಿಯನ್ (ಸುಮಾರು ₹6,600 ಕೋಟಿ) ಗೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಈ ಮೂಲಕ ಪಾಕಿಸ್ತಾನದ ತೈಲ ಆಮದು ವೆಚ್ಚದಲ್ಲಿ ಸುಮಾರು 167% ಏರಿಕೆ ಕಂಡುಬಂದಿದೆ. ಕಳೆದ ಎರಡು ವರ್ಷಗಳಿಂದ ಆರ್ಥಿಕತೆಯನ್ನು ಸ್ಥಿರಗೊಳಿಸಲು ಸರ್ಕಾರ ಕೈಗೊಂಡ ಪ್ರಯತ್ನಗಳಿಗೆ ಈ ಸಂಘರ್ಷ ದೊಡ್ಡ ಹೊಡೆತ ನೀಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ದೇಶವು ಆರ್ಥಿಕ ಸುಧಾರಣೆಯ ಹಾದಿಯಲ್ಲಿದ್ದಾಗಲೇ ಈ ಅನಿರೀಕ್ಷಿತ ಸಂಕಷ್ಟ ಎದುರಾಗಿರುವುದು ಚಿಂತಾಜನಕ ಎಂದು ಪ್ರಧಾನಿ ಹೇಳಿದರು.


