ಹುಬ್ಬಳ್ಳಿ ; ನಾನು ಪಕ್ಷಗೊಸ್ಕರ ಹಗಲಿರುಳು ದುಡಿದವನು ,ತಳಮಟ್ಟದ ಪಕ್ಷದ ಕಾರ್ಯಕರ್ತ ನಾನು ಉತ್ತರ ಕರ್ನಾಟಕದಲ್ಲಿ ಪಕ್ಷ ಕಟ್ಟುವಲ್ಲಿ ಶ್ರಮವಹಿಸಿದ್ದೆನೆ ಎಂದು ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ರವರು ಬಿ.ಎಲ್ ಸಂತೋಷ್ ಅಂಡ್ ಟೀಮ್ ವಿರುದ್ಧ ಗುಡುಗಿದ್ದಾರೆ.
ಸಂತೋಷ್ ನ ಆಪ್ತನಿಗೆ ಮಾತ್ರ ಎಲ್ಲಾ ಕಡೆ ಸೀಟ್ ಸಿಕ್ಕಿದೆ , ಸವದಿ ,ನಾನು ,ಈಶ್ವರಪ್ಪ,ಮೈಸೂರಿನಲ್ಲಿ ರಾಮದಾಸ್ ಎಲ್ಲರನ್ನು ಮೂಲೆಗುಂಪು ಮಾಡಲು ಹೊರಟವರೆ ಈ ಸಂತೋಷ್ ಮತ್ತು ಟೀಮ್.
ಇಷ್ಟು ವರ್ಷ ಪಕ್ಷಗೊಸ್ಕರ ದುಡಿದು ಒಮ್ಮೆಲೆ ಟೀಕೆಟ್ ಇಲ್ಲ ಎಂದು ಹೇಳಿದರೆ ನನ್ನ ಮರ್ಯಾದಿ ಪ್ರಶ್ನೆ . ಆದರಿಂದ ಈ ನಿರ್ಧಾರ ನಾನು ತೆಗೆದುಕೊಂಡೆ. ಇನ್ನಷ್ಟು ಜನ ಪಕ್ಷಬಿಡಲಿದ್ದಾರೆ ಎಂದು ಟಾಂಗ್ ಕೊಟ್ಡಿದ್ದಾರೆ. ಒಂದು ಚುನಾವಣೆ ಗೆಲ್ಲದ ಅಣ್ಣಾಮಲೈ ಗೆ ಕರ್ನಾಟಕದ ಚುನಾವಣಾ ಉಸ್ತುವಾರಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಕೇವಲ ಮಂಗಳೂರಿಗಷ್ಟೇ ಸಿಮೀತವಾಗಿರುವ ಬಂಟ ಸಮಾಜದ ನಳೀನ್ ಕುಮಾರ್ ಕಟೀಲನನ್ನು ರಾಜ್ಯಧ್ಯಕ್ಷ ಮಾಡಿದ ಬಿ.ಎಲ್ ಸತೋಷ್ , ರಾಜ್ಯಾಧ್ಯಕ್ಷ ಅವಧಿ ಮುಗಿದು ವರ್ಷ ಕಳೆದರು ಹೊಸ ರಾಜ್ಯಧ್ಯಕ್ಷ ರ ನೇಮಕ ಮಾಡಲೇ ಇಲ್ಲ ಇದರಿಂದ ಗೊತ್ತಾಗೊತ್ತೆ ಅವರು ಎನೆಲ್ಲಾ ಅವ್ಯವಹಾರ ಮಾಡುತ್ತಾರೆಂದು ,ಹಾಗೂ ಕಳೆದ ಕೆಲ ದಿನಗಳ ಹಿ಼ಂದೆ ಶೆಟ್ಟರ್, ಈಶ್ವರಪ್ಪ, ಯಡಿಯೂರಪ್ಪ ಕಥೆ ಮುಗಿಯುತ್ತದೆ ಎಂದು ಆಡೀಯೋ ವೈರಲ್ ಮಾಡಿದ್ದರು ಇದು ಕೂಡ ಒಂದು ಇವರಿಬ್ಬರ ಸಂಚು ಎಂದು ಹೇಳಿದ್ದಾರೆ.