Friday, July 10, 2026
Homeರಾಜಕೀಯಹುಬ್ಬಳ್ಳಿ : ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ - ಸಿದ್ದರಾಮಯ್ಯ ಹೇಳಿಕೆಗೆ ನಾಯಕರು ಆಕ್ರೋಶ.

ಹುಬ್ಬಳ್ಳಿ : ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ – ಸಿದ್ದರಾಮಯ್ಯ ಹೇಳಿಕೆಗೆ ನಾಯಕರು ಆಕ್ರೋಶ.

ಹುಬ್ಬಳ್ಳಿ : ಸೋಮವಾರ ರಾತ್ರಿ ಇಲ್ಲಿನ ಬಾಷಾ ಪೀರಾ ದರ್ಗಾದಲ್ಲಿ ನಡೆದ ದಕ್ಷಿಣ ಭಾರತ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವಾಗ ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ೧೦ ಸಾವಿರ ಕೋಟಿ ಕೊಡುವುದಾಗಿ ನೀಡಿದ ಹೇಳಿಕೆಗೆ ರಾಜ್ಯವ್ಯಾಪಿ ವ್ಯಾಪಕ ಆಕ್ಷೇಪ, ಟೀಕೆ ವ್ಯಕ್ತವಾಗಿದೆ.

ಇದೇ ವಿಷಯಕ್ಕೆ ಸಂಬAಧಿಸಿದAತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪರ ವಿರೋಧ ಹೇಳಿಕೆ ನೀಡಿದ್ದರೆ, ಕೆಲ ಸ್ವಾಮೀಜಿಗಳು ಮುಖ್ಯಮಂತ್ರಿ ಹೇಳಿಕೆಗೆ ಆಕ್ಷೇಪ ವ್ಯಕ್ತ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯು ತುಷ್ಟೀಕರಣ, ಮತ ಬ್ಯಾಂಕಿನ ರಾಜಕಾರಣ ಉದ್ದೇಶದಿಂದ ಕೂಡಿದೆ. ಎಲ್ಲರಿಗೂ ನ್ಯಾಯ ಕೊಡುವಂತಹ ಮುಖ್ಯಮಂತ್ರಿ ಕರ್ತವ್ಯ ಮರೆತಂತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಈಗಾಗಲೇ ಅಲ್ಪಸಂಖ್ಯಾತರಿಗೆ ವಕ್ಫ್ ಬೋರ್ಡ್, ಮೈನಾರಿಟಿ ಕಾರ್ಪೊರೇಷನ್, ಮೈನಾರಿಟಿ ಕಮಿಷನ್ ಹೀಗೆ ಅನೇಕ ಸಂಸ್ಥೆ, ನಿಗಮಗಳಿವೆ. ಅವುಗಳಿಗೆ ಅನುದಾನ ಒದಗಿಸಲಾಗುತ್ತಿದೆ. ಈಗ ಮುಖ್ಯಮಂತ್ರಿ ನೀಡಿರುವ ಹೇಳಿಕೆಯು ಎಲ್ಲ ಸಮುದಾಯಗಳ ಮೇಲೆ ಸವಾರಿ ಮಾಡುವ ರೀತಿಯದ್ದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಂವಿಧಾನ ಬದ್ಧವಾಗಿ ರೂಪುಗೊಂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾತ್ಯತೀತವಾಗಿ ಸರ್ವರನ್ನೂ ಸಮಚಿತ್ತದಿಂದ ಕಾಣಬೇಕು. ಸರ್ಕಾರಗಳು ಪ್ರಜೆಗಳಿಗೆಲ್ಲರಿಗೂ ಅನುಕೂಲವಾಗುವಂತೆ ನೋಡಿಕೊಳ್ಳಬೇಕು, ಯಾರೊಬ್ಬರಿಗೂ ತೊಂದರೆಯಾಗದAತೆ ವರ್ತಿಸಬೇಕು. ಹಾಗಿದ್ದಾಗ ಮಾತ್ರ ಸಮಾಜದ ಎಲ್ಲ ನಾಗರಿಕರು ನೆಮ್ಮದಿಯ ಬದುಕನ್ನು ಬಾಳಲು ಸಾಧ್ಯ. ಅದರ ಬದಲಾಗಿ ಯಾವುದೋ ಒಂದು ಸಂಘಟನೆ, ಸಮುದಾಯ ಅಥವಾ ಸಮಾಜವನ್ನು ಉಲ್ಲೇಖಿಸಿ, `ನಿಮ್ಮ ಹಿಂದೆ ನಾವಿದ್ದೇವೆ, ನಿಮಗಿಷ್ಟು ಪಾಲು ಇದೆ. ನಿಮ್ಮ ಪಾಲನ್ನು ಕೊಟ್ಟೇಕೊಡುತ್ತೇವೆ’ ಎಂಬಿತ್ಯಾದಿ ಮಾತುಗಳನ್ನಾಡಿದಲ್ಲಿ ಇನ್ನೊಂದು ವರ್ಗಕ್ಕೆ ನೋವಾಗುವ ಸಂಭವ ಇದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular