ಹಾವೇರಿ ; ಸರಕಾರಿ ಅಧಿಕಾರಿಗಳೆ ಇಷ್ಟು . ಜನಸಾಮಾನ್ಯರನ್ನು ದೋಚುವುದರಲ್ಲಿ ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿ ಬಿಡ್ತಾರೆ.ಅದರಲ್ಲೂ ಸಂಬಳ ಜಾಸ್ತಿ ಮಾಡಲು ಪ್ರತಿಭಟನೆ ಬೇರೆ, ಈ ಅಧಿಕಾರಿಗಳು ಲಂಚ ಇಲ್ಲದೆ ಒಂದಿಷ್ಟೂ ಫೈಲ್ ಮುಂದೆ ಹೋಗಲ್ಲ.ಇದಕ್ಕೆ ಮುಖ್ಯ ಕಾರಣ ಭೃಷ್ಟಚಾರ ದ ಕರಿಚಾಯೆ.
ಅನ್ನದಾತ ಸುಖಿನೊಭವ ಎಂಬ ಮಾತಿದೆ ,ಅಂದ ಹಾಗೆ ಸರಕಾರಿ ನೌಕರನಿಗೆ ಲಂಚ ನೀಡಲು ಹಣ ಇಲ್ಲದ ಕಾರಣ ಬಡ ರೈತನೊಬ್ಬ ತನ್ನ ಎತ್ತು ಹಾಗು ಚಕ್ಕಡಿಯ ಜೊತೆ ಸರಕಾರಿ ಕಛೇರಿ ಗೆ ಬಂದ ಘಟನೆ ನಡೆದಿದೆ ಈ ಸರಕಾರಿ ನೌಕರರಿಗೆ ಈ ರೀತಿ ಮಾಡುವುದನ್ನ ಬಿಟ್ಟು ಭಿಕ್ಷೆ ಬೇಡಬಹುದಲ್ಲವೇ.
ಆಸ್ತಿಯ ಇ- ಸ್ವತ್ತು ಮಾಡಿಕೊಡಲು ಪುರಸಭೆ ಅಧಿಕಾರಿ 25000 ಲಂಚ ಕೇಳಿದ್ದರಿಂದ ಮನನೊಂದ ರೈತನೊಬ್ಬ ತನ್ನ ಎತ್ತು ಹಾಗೂ ತಕ್ಕಡಿಯೊಂದಿಗೆ ಹಣವಿಲ್ಲದೆ ಸ್ವತ್ತು ಮಾಡಿಕೊಂಡು ಬಂದ ಘಟನೆ ಹಾವೇರಿ ಪುರಸಭೆ ಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ನಿವಾಸಿ ಯಲ್ಲಪ್ಪ ತಿಪ್ಪಣ್ಣ ಠಾಣೋಜಿ ಎಂದು ತಿಳಿದು ಬಂದಿದೆ.
ಇದಕ್ಕಿಂತ ಮೊದಲು ಕೈಯಿಂದ ಬರೆದ ಉತಾರ ನೀಡುತ್ತಿದ್ದರು ಇದೀಗ ಪುರಸಭೆ ವ್ಯಾಪ್ತಿಯಲ್ಲಿ ಇ- ಸ್ವತ್ತು ಬಂದಿದ್ದರಿಂದ ಅದರಡಿ ಆಸ್ತಿ ವರ್ಗಾಯಿಸಿ ಎಂದು ಪುರಸಭೆ ಗೆ ಅರ್ಜಿ ಸಲ್ಲಿಸಿದ್ದರು.ಪುರಸಭೆ ಮುಖ್ಯ ಅಧಿಕಾರಿ 25000 ಲಂಚ ಕೇಳಿದ ಕಾರಣ ಮನ ಮೊಂದ ರೈತ ತನ್ನ ಎತ್ತುಗಳ ಜೊತೆ ಬಂದ ಘಟನೆ ನಡೆದಿದ ಇದರಿಂದ ಸರಕಾರಕ್ಕೆ ನಾಚಿಗೇಡಿನ ಘಟನೆ ಸಂಭವಿಸಿದೆ.