Monday, April 28, 2025
Flats for sale
Homeವಿದೇಶಸ್ಯಾಂಟೊ ಡೊಮಿಂಗೊ : ನೈಟ್‌ಕ್ಲಬ್‌ನಲ್ಲಿ ಛಾವಣಿ ಕುಸಿದು 98 ಜನ ಸಾವು,150 ಕ್ಕೂ ಹೆಚ್ಚು ಮಂದಿಗೆ...

ಸ್ಯಾಂಟೊ ಡೊಮಿಂಗೊ : ನೈಟ್‌ಕ್ಲಬ್‌ನಲ್ಲಿ ಛಾವಣಿ ಕುಸಿದು 98 ಜನ ಸಾವು,150 ಕ್ಕೂ ಹೆಚ್ಚು ಮಂದಿಗೆ ಗಾಯ..!

ಸ್ಯಾಂಟೊ ಡೊಮಿಂಗೊ : ಡೊಮಿನಿಕನ್ ಗಣರಾಜ್ಯದ ರಾಜಧಾನಿ ಸ್ಯಾಂಟೊ ಡೊಮಿಂಗೊದಲ್ಲಿ ನೈಟ್‌ಕ್ಲಬ್‌ನಲ್ಲಿ ಛಾವಣಿ ಕುಸಿದು ಕನಿಷ್ಠ 98 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಪ್ರಾಂತೀಯ ಗವರ್ನರ್ ಮತ್ತು ಮಾಜಿ ಮೇಜರ್ ಲೀಗ್ ಬೇಸ್‌ಬಾಲ್ ಪಿಚರ್ ಆಕ್ಟೇವಿಯೊ ಡೋಟೆಲ್ ಮೃತಪಟ್ಟವರಲ್ಲಿ ಸೇರಿದ್ದಾರೆ.51 ವರ್ಷದ ಡೋಟೆಲ್ ಅವರು ಅವಶೇಷಗಳಿಂದ ಹೊರತೆಗೆದ ನಂತರ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಜಾನೆ ಜೆಟ್ ಸೆಟ್ ನೈಟ್‌ಕ್ಲಬ್‌ನಲ್ಲಿ ಜನಪ್ರಿಯ ಮೆರೆಂಗ್ಯೂ ಗಾಯಕ ರುಬ್ಬಿ ಪೆರೆಜ್ ಅವರ ಸಂಗೀತ ಕಚೇರಿಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರಲ್ಲಿ ಅವರೂ ಸೇರಿದ್ದಾರೆ ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ. ಸ್ಥಳದಲ್ಲಿ ನೂರಾರು ಜನರು ಇದ್ದರು ಮತ್ತು ಸುಮಾರು 400 ರಕ್ಷಕರು ಇನ್ನೂ ಬದುಕುಳಿದವರಿಗಾಗಿ ಹುಡುಕುತ್ತಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾದ್ಯತೆ ಇದೆ ಎನ್ನಲಾಗಿದೆ. ಕುಸಿದ ಛಾವಣಿಯಡಿಯಲ್ಲಿ ಸಮಾಧಿಯಾದವರಲ್ಲಿ ಹಲವರು ಇನ್ನೂ ಜೀವಂತವಾಗಿದ್ದಾರೆ ಎಂಬ ಭರವಸೆ ಇದೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರದ ನಿರ್ದೇಶಕ ಜುವಾನ್ ಮ್ಯಾನುಯೆಲ್ ಮೆಂಡೆಜ್ ಹೇಳಿದ್ದಾರೆ.

ಜೆಟ್ ಸೆಟ್ ಸ್ಯಾಂಟೊ ಡೊಮಿಂಗೊದಲ್ಲಿನ ಜನಪ್ರಿಯ ನೈಟ್‌ಕ್ಲಬ್ ಆಗಿದ್ದು, ನಿಯಮಿತವಾಗಿ ನೃತ್ಯ ಸಂಗೀತ ಕಚೇರಿಗಳನ್ನು ಆಯೋಜಿಸುತ್ತದೆ. ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು. ಬಲಿಪಶುಗಳಲ್ಲಿ ಮಾಂಟೆ ಕ್ರಿಸ್ಟಿ ಪ್ರಾಂತ್ಯದ ಗವರ್ನರ್ ನೆಲ್ಸಿ ಕ್ರೂಜ್ ಕೂಡ ಇದ್ದಾರೆ ಎಂದು ಅಧ್ಯಕ್ಷ ಲೂಯಿಸ್ ಅಬಿನಾಡರ್ ಹೇಳಿದ್ದಾರೆ.

ಕ್ಲಬ್‌ನ ಒಳಗೆ ತೆಗೆದ ವೀಡಿಯೊ ತುಣುಕಿನಲ್ಲಿ ಜನರು ವೇದಿಕೆಯ ಮುಂಭಾಗದ ಟೇಬಲ್‌ಗಳಲ್ಲಿ ಕುಳಿತುಕೊಂಡಿರುವುದನ್ನು ತೋರಿಸುತ್ತದೆ ಮತ್ತು ಕೆಲವರು ರೂಬಿ ಪೆರೆಜ್ ಹಾಡುತ್ತಿರುವಾಗ ಹಿಂದೆ ಸಂಗೀತಕ್ಕೆ ನೃತ್ಯ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಪ್ರತ್ಯೇಕ ಮೊಬೈಲ್ ಫೋನ್ ರೆಕಾರ್ಡಿಂಗ್‌ನಲ್ಲಿ, ವೇದಿಕೆಯ ಪಕ್ಕದಲ್ಲಿ ನಿಂತಿರುವ ವ್ಯಕ್ತಿಯೊಬ್ಬರು “ಸೀಲಿಂಗ್‌ನಿAದ ಏನೋ ಬಿದ್ದಿದೆ” ಎಂದು ಹೇಳುವುದನ್ನು ಕೇಳಬಹುದು, ಆದರೆ ಅವನ ಬೆರಳು ಛಾವಣಿಯ ಕಡೆಗೆ ತೋರಿಸುವುದನ್ನು ಕಾಣಬಹುದಾಗಿದೆ.

ತುಣುಕಿನಲ್ಲಿ, ಗಾಯಕ ರುಬ್ಬಿ ಪೆರೆಜ್ ಕೂಡ ಆ ವ್ಯಕ್ತಿ ಸೂಚಿಸಿದ ಪ್ರದೇಶದ ಕಡೆಗೆ ನೋಡುತ್ತಿರುವಂತೆ ತೋರುತ್ತಿದೆ.೩೦ ಸೆಕೆಂಡುಗಳಿಗಿAತ ಕಡಿಮೆ ಸಮಯದ ನಂತರ, ಒಂದು ಶಬ್ದ ಕೇಳಬಹುದು ಮತ್ತು ರೆಕಾರ್ಡಿಂಗ್ ಕಪ್ಪಾಗುತ್ತದೆ ಮತ್ತು ಮಹಿಳೆಯೊಬ್ಬರು “ಅಪ್ಪಾ, ನಿಮಗೆ ಏನಾಯಿತು?” ಎಂದು ಕೂಗುವುದು ಕೇಳಿಬಂದಿದೆ. “ಬೆಳಿಗ್ಗೆ 1 ಗಂಟೆ ಸುಮಾರಿಗೆ” ಕುಸಿತ ಸಂಭವಿಸಿದಾಗ ಕ್ಲಬ್ ತುಂಬಿತ್ತು ಎಂದು ರುಬ್ಬಿ ಪೆರೆಜ್ ಅವರ ಬ್ಯಾಂಡ್ ಸದಸ್ಯರಲ್ಲಿ ಒಬ್ಬರು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular