ಸೂರತ್ : ದೇಶದಲ್ಲಿ ಮೊದಲ ಬಾರಿಗೆ ಬ್ಯಾರಿಯರ್ ರಹಿತ ಟೋಲಿಂಗ್ ವ್ಯವಸ್ಥೆಯನ್ನು ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದ್ದು, ಟೋಲ್ ಸಂಗ್ರಹಣೆಯಲ್ಲಿ ಹೊಸ ಯುಗ ಆರಂಭವಾಗಿದೆ. ಈ ವ್ಯವಸ್ಥೆಯನ್ನು ರಾಷ್ಟ್ರೀಯ ಹೆದ್ದಾರಿ 48 ರ ಸೂರತ್–ಭರೂಚ್ ನಡುವಿನ ಚೋರಾಯಿಸಿ ಟೋಲ್ ಪ್ಲಾಜಾದಲ್ಲಿ ಜಾರಿಗೆ ತರಲಾಗಿದೆ.
ಏನಿದು ಬ್ಯಾರಿಯರ್ ರಹಿತ ಟೋಲಿಂಗ್?
ಈ ಹೊಸ ವ್ಯವಸ್ಥೆಯಲ್ಲಿ ಟೋಲ್ ಪ್ಲಾಜಾದಲ್ಲಿ ಗೇಟ್ ಅಥವಾ ಬ್ಯಾರಿಯರ್ ಇರುವುದಿಲ್ಲ ವಾಹನಗಳು ನಿಲ್ಲದೇ ನೇರವಾಗಿ ಸಾಗಬಹುದು ಕ್ಯಾಮರಾಗಳು ವಾಹನದ ನಂಬರ್ ಪ್ಲೇಟ್ ಅನ್ನು ಸ್ಕ್ಯಾನ್ ಮಾಡುತ್ತವೆ ಅದರ ಆಧಾರದಲ್ಲಿ ಟೋಲ್ ಶುಲ್ಕವನ್ನು ಸ್ವಯಂಚಾಲಿತವಾಗಿ ಪಾವತಿಸಲಾಗುತ್ತದೆ . ಹೈ-ಟೆಕ್ ANPR (Automatic Number Plate Recognition) ಕ್ಯಾಮರಾಗಳು
ವಾಹನದ ಸಂಖ್ಯೆಯನ್ನು ಓದಿ ಡೇಟಾಬೇಸ್ ಜೊತೆ ಹೊಂದಾಣಿಕೆ ಹೊಂದಿದ್ದು ಬ್ಯಾಂಕ್/ಫಾಸ್‌ಟ್ಯಾಗ್ ಖಾತೆಯಿಂದ ಸ್ವಯಂ ಕಡಿತವಾಗಲಿದೆ.
ಈ ವ್ಯವಸ್ಥೆಯಿಂದ ವಾಹನ ಸವಾರರಿಗೆ ಲಾಭವಾಗಲಿದೆ. ಟೋಲ್ ಬಳಿ ನಿಲ್ಲುವ ಅವಶ್ಯಕತೆ ಇಲ್ಲದಂತಾಗಿದ್ದು ಟ್ರಾಫಿಕ್ ಜಾಮ್ ಕಡಿತ,ಇಂಧನ ಉಳಿತಾಯ, ಸಮಯ ಉಳಿತಾಯವಾಗಲಿದೆ. ಕೇಂದ್ರ ಸರ್ಕಾರ ಈ “ಗುಜರಾತ್ ಮಾದರಿ”ಯನ್ನು 2029ರೊಳಗೆ ದೇಶಾದ್ಯಂತ ಜಾರಿಗೆ ತರಲು ಯೋಜಿಸಿದೆ. ಒಟ್ಟಿನಲ್ಲಿ, ಈ ಹೊಸ ವ್ಯವಸ್ಥೆ ಭಾರತದಲ್ಲಿ ರಸ್ತೆ ಸಂಚಾರವನ್ನು ವೇಗವಾಗಿ, ಸುಗಮವಾಗಿ ಮತ್ತು ತಂತ್ರಜ್ಞಾನ ಆಧಾರಿತವಾಗಿಸಲು ಮಹತ್ವದ ಹೆಜ್ಜೆಯಾಗಿದೆ.


