Thursday, July 23, 2026
Homeರಾಜ್ಯಶಿವಮೊಗ್ಗ : ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ.

ಶಿವಮೊಗ್ಗ : ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ.

ಶಿವಮೊಗ್ಗ : ನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕ್ಲಾರ್ಕ್ ಪೇಟೆ ಬಡಾವಣೆ ಮನೆಯೊಂದರಲ್ಲಿ ನಡೆದಿದೆ.

ಭುವನೇಶ್ವರಿ, ಮೋಹನ್ ಮತ್ತು ದರ್ಶನ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿಗಳು. ಕಿತ್ತು ತಿನ್ನುವ ಬಡತನ, ತಮ್ಮನಿಗೆ ಅನಾರೋಗ್ಯ, ಬೆಳೆದು ನಿಂತ ಮಗ ನೆಟ್ಟಗೆ ದುಡಿಯಲಿಲ್ಲ. ಹೀಗಾಗಿ ಮಹಿಳೆಯೇ ದುಡಿದು ಸಂಸಾರ ನಡೆಸುತ್ತಿದ್ದಳು. ಮನೆಯಲ್ಲಿ ಒಬ್ಬಳೇ ದುಡಿದು ಸಾಕಾಗಿ ಹೋಗಿದ್ದ ಮಹಿಳೆಯು ಇಬ್ಬರಿಗೂ ವಿಷಕೊಟ್ಟು ತಾನು ವಿಷಸೇವಿಸಿ ಆತ್ಮಹತ್ಯೆ ಶರಣಾಗಿದ್ದಾಳೆಂದು ತಿಳಿದುಬಂದಿದೆ.

ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದ. ಭುವನೇಶ್ವರಿ ಹೊಟೇಲ್ ಕೆಲಸ ಮಾಡಿಕೊಂಡಿದ್ದಳು. ಇಡೀ ಕುಟುಂಬದ ಜವಾಬ್ದಾರಿಯು ಮಹಿಳೆಯ ಮೇಲೆ ಇತ್ತು. ಮನೆಯಲ್ಲಿ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಮತ್ತು ವಯಸ್ಸಿಗೆ ಬಂದ ಮಗನು ನೆಟ್ಟಿಗೆ ದುಡಿಯುತ್ತಿರಲಿಲ್ಲ. ಈ ಇಬ್ಬರು ದುಡಿಯದೇ ಇರುವುದು ದೊಡ್ಡ ಸಮಸ್ಯೆಯಾಗಿತ್ತು.ಇದರಿಂದ ರೋಸಿ ಹೋಗಿದ್ದ ತಾಯಿ ಮೊನ್ನೆ(ಆ.11) ರಾತ್ರಿ ಇಬ್ಬರಿಗೂ ಊಟದಲ್ಲಿ ವಿಷ ಕೊಟ್ಟು ಕೊಂದಿದ್ದಾಳೆ. ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆ ಒಳಗೆಯಿಂದ ಲಾಕ್ ಆಗಿತ್ತು. ಅಕ್ಕ-ಪಕ್ಕದವರಿಗೆ ಶವದ ದುರ್ವಾಸನೆ ಬರುವುದಕ್ಕೆ ಶುರುವಾಗಿದೆ. ಬಳಿಕ ಕಿಟಕಿ ಗಾಜು ಒಡೆದು ನೋಡಿದಾಗ ಮೂವರು ಮೃತಪಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.

ದೊಡ್ಡಪೇಟೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು ಹೆಚ್ಚುವರಿ ಎಸ್ಪಿ ಸೇರಿದಂತೆ ಠಾಣೆಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular