Thursday, July 23, 2026
Homeರಾಜ್ಯಶಿರಾ : ಮೀನುಗಳಿಗೂ ತಟ್ಟಿದ ಬಿಸಿಲ ಬೇಗೆ, ನೀರಿಲ್ಲದೇ ವಿಲವಿಲನೇ ಒದ್ದಾಡಿ ಸಾವಿರಾರು ಮೀನುಗಳು ಸಾವು.

ಶಿರಾ : ಮೀನುಗಳಿಗೂ ತಟ್ಟಿದ ಬಿಸಿಲ ಬೇಗೆ, ನೀರಿಲ್ಲದೇ ವಿಲವಿಲನೇ ಒದ್ದಾಡಿ ಸಾವಿರಾರು ಮೀನುಗಳು ಸಾವು.

ಶಿರಾ : ತಾಲ್ಲೂಕಿನ ದೊಡ್ಡಗೂಳ ಗ್ರಾಮದ ಕೆರೆಯಲ್ಲಿ ಬಿಸಿಲ ಬೇಗೆಗೆ ನೀರು ಕಡಿಮೆಯಾಗಿ ಗುಂಡಿ ಗುದ್ದರಗಳಲ್ಲಿ ನೀರಿವೆ. ಮೀನುಗಳಿಗೂ ತಟ್ಟಿತು ಬಿಸಿಲ ಬೇಗೆ ಕಳೆದ ವರ್ಷ ಮಳೆಯಾಗದ ಹಿನ್ನೆಲೆಯಲ್ಲಿ ಈ ವರ್ಷ ಜನವರಿಯಿಂದ ಬಿಸಿಲಿನ ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಕೆರೆಯಲ್ಲಿನ ನೀರು ಬತ್ತಿದ ಪರಿಣಾಮ ಮೀನು ಸಾವನ್ನಪ್ಪಿವೆ .

ಈ ಬಾರಿ ಉಷ್ಣಾಂಶ 40.45 ವರಗೆ ಹೆಚ್ಚಾಗುತ್ತಿರುವುದರಿಂದ ಮುಂಗಾರಿನಿಂದ ಹಿಂಗಾರಿನವರೆಗೆ ಮಳೆ ಬೀಳದ ಪರಿಣಾಮ ತುಂಬಿದ್ದ ಕೆರೆಕಟ್ಟೆಗಳು ಸಂಪೂರ್ಣವಾಗಿ ಖಾಲಿಯಾಗಿವೆ. ಇದೇ ದಿಕ್ಕಿನಲ್ಲಿ ಅಲ್ಪಸ್ವಲ್ಪ ನೀರಿನಲ್ಲಿ ಜೀವ ಉಳಿಸಿಕೊಂಡಿದ್ದ ಗ್ರಾಮದ ಕೆರೆಯಲ್ಲಿನ ಮೀನುಗಳು ಇತ್ತೀಚೆಗೆ ಬಿಸಿಲಿನ ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಕೆರೆಯಲ್ಲಿನ ನೀರು ಸಂಪೂರ್ಣವಾಗಿ ಬತ್ತಿದ ಹಿನ್ನೆಲೆಯಲ್ಲಿ ಕೆರೆಯಲ್ಲಿದ್ದ ಮೀನುಗಳು ಸಾವನ್ನಪ್ಪಿವೆ.

ಕೆರೆಯಲ್ಲಿ ನೀರು ಕಡಿಮೆಯಾಗಿ, ಇರುವ ನೀರು ಕಲುಷಿತಗೊಂಡು ಮೀನುಗಳು ಸತ್ತಿದ್ದವು. ಒಂದು ವಾರದಿಂದ ಮೀನು ಸಾಯುತ್ತಿದ್ದರೂ ಯಾರೂ ಭೇಟಿ ನೀಡಿ ಪರಿಶೀಲಿಸುವ, ಸತ್ತ ಮೀನು ತೆರವುಗೊಳಿಸುವ ಕಾರ್ಯ ಮಾಡಿರಲಿಲ್ಲ. ಇದರಿಂದ ದುರ್ವಾಸನೆ ಉಂಟಾಗಿತ್ತು. ಎಂದು ಗ್ರಾಮಸ್ಥರು ದೂರಿನ ಹಿನ್ನೆಲೆಯಲ್ಲಿ ಇಂದು ಸ್ಥಳೀಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸತ್ತ ಮೀನುಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular