Saturday, July 18, 2026
Homeರಾಜ್ಯವಿಜಯಪುರ : ಬಸ್ ಹಾಗೂ ಬೈಕ್ ಮಧ್ಯೆ ಭೀಕರ ಅಪಘಾತ ,ಬೈಕ್ ಸವಾರ ಸಜೀವ ದಹನ.

ವಿಜಯಪುರ : ಬಸ್ ಹಾಗೂ ಬೈಕ್ ಮಧ್ಯೆ ಭೀಕರ ಅಪಘಾತ ,ಬೈಕ್ ಸವಾರ ಸಜೀವ ದಹನ.

ವಿಜಯಪುರ : ಬಸ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸಜೀವ ದಹನವಾದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್‌ ಗೇಟ್ ಬಳಿ ನಡೆದಿದೆ.ಅಪಘಾತದ ರಭಸಕ್ಕೆ ಬಸ್ ಹೊತ್ತಿ ಉರಿದಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರೆಂದು ತಿಳಿದುಬಂದಿದೆ.

KA28 F 2095 ಸಾರಿಗೆ ಸಂಸ್ಥೆಯ ಬಸ್ ಹಾಗೂ KA28 HK 2551 ಬೈಕ್ ಮಧ್ಯೆ ಮುಖಾ ಮುಖಿ ಡಿಕ್ಕಿ ಹೊಡೆದಿದ್ದು ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದ ಮುಳಸಾವಳಗಿ ಗ್ರಾಮದ ನಿವಾಸಿ ಅಭಿಷೇಕ್ ಸಾಯಬಾಗೌಡ ನಾಗರಾಳ (19) ಮೃತ ಪಟ್ಟಿದ್ದಾನೆ.ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಬೆಂಕಿ ನಂದಿಸಲು ಸಿಂದಗಿ ಅಗ್ನಿಶಾಮಕ ದಳ ಹಾಗೂ ಪೊಲೀಸರ ಭೇಟಿ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular