Thursday, July 23, 2026
Homeರಾಜ್ಯಯಾದಗಿರಿ : ಮಾಜಿ ಸಚಿವ ಭೈರತಿ ಬಸವರಾಜ ಕಾರು ಪಲ್ಟಿ,ಪ್ರಾಣಾಪಾಯದಿಂದ ಪಾರು.

ಯಾದಗಿರಿ : ಮಾಜಿ ಸಚಿವ ಭೈರತಿ ಬಸವರಾಜ ಕಾರು ಪಲ್ಟಿ,ಪ್ರಾಣಾಪಾಯದಿಂದ ಪಾರು.

ಯಾದಗಿರಿ : ಸುರಪುರ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಗೆ ಆಗಮಿಸಿದ ಮಾಜಿ ಸಚಿವ ಸಚಿವ ಭೈರತಿ ಬಸವರಾಜ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಾಮನಟಗಿ ಗ್ರಾಮದ ಎರೆ ಕೆನಾಲ್ ಬಳಿ ನಡೆದಿದೆ.

ಚುನಾವಣಾ ಪ್ರಚಾರದ ವೇಳೆ ಸುರಪುರ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಗೆ ಆಗಮಿಸಿದ ಮಾಜಿ ಸಚಿವ ಭೈರತಿ ಬಸವರಾಜ್ ಮುಂದೆ ಬೇರೆಯವರ ಕಾರಿನಲ್ಲಿ ತೆರಳಿದ್ದರು ಈ ಹಿನ್ನೆಲೆ ಮಾಜಿ ಸಚಿವರ ಕಾರಿನ ಹಿಂದೆ ಕಾರು‌ ಚಾಲಕ ಹಾಗೂ ಗನ್ ಮ್ಯಾನ್ ಹೋಗುವಾಗ ಕಾರು ಪಲ್ಟಿಯಾಗಿದೆ. ಅದೃಷ್ಟವಶಾತ್ ಚಾಲಕ ಹಾಗೂ ಗನ್ ಮ್ಯಾನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಾಳು ಕಾರು ಚಾಲಕ ಹಾಗೂ ಗನ್ ಮ್ಯಾನ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಹುಣಸಗಿ ಆಸ್ಪತ್ರೆ ಚಿಕಿತ್ಸೆಗೆ ದಾಖಲಿಸಿದ್ದಾರೆ.ಹುಣಸಗಿ ಪೊಲೀಸ್ ಠಾಣೆ ಪಿಎಸ್ಐ ಸಂಗೀತಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular