ಮೈಸೂರು ; ಪಕ್ಷ ಕಟ್ಟಲು ಹಗಳಿರುಲು ದುಡಿದ ನಾಯಕರನ್ನು ಮ಼ೂಲೆಗುಂಪು ಮಾಡಲು ಹೊರಟಿರುವ ನವ ಬಿಜೆಪಿ ನಾಯಕರ ನಿರ್ಧಾರದಿಂದ ಟಿಕೆಟ್ ತಪ್ಪಿದ ಕಾರಣ ಅಸಮಾಧಾನಗೊಂಡಿರುವ ರಾಮದಾಸ್ ,30 ವರ್ಷ ಇದ್ದ ತಾಯಿಮನೆಯಿಂದ ಹೊರಹಾಕಿದ ಕಾರಣ ಇಲ್ಲಿ ಇರಬೇಕೋ ,ಬಿಡಬೇಕೋ ಎಂದು ಕಾರ್ಯಕರ್ತರ ಜೊತೆ ಚರ್ಚಿಸಿ ನಾಳೆ ನಿರ್ಧರಿಸುತ್ತಾರೆಂದು ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ನಾಯಕರ ತಲೆಕೆಟ್ಟಿದ್ದು ಇವರ ಈ ನಿರ್ಧಾರದಿಂದ ಪಕ್ಷಕ್ಕೆ ತೀವ್ರ ಹಾನಿಉಂಟಾಗಲಿದೆ ಎಂದು ಹೇಳಿದ್ದಾರೆ. ಸಂಸದ ಪ್ರತಾಪ್ ಸಿಂಹರನ್ನು ಮಾಡಲು ಹೊರಟ ರಾಮದಾಸ್ ಬೇಟಿ ಆಗಲು ಸಾಧ್ಯವಾಗದ ಕಾರಣ ಬಿಜೆಪಿಯ ಕಛೇರಿಯ ಹಿಂಬಾಗಿಲಿನಿಂದ ಹೊರನಡೆದಿದ್ದಾರೆ.
ಈ ಅಸಮಾಧಾನ ಯಾವ ರೀತಿ ಸ್ಪೋಟಗೊಳ್ಳೊತ್ತೊ ಎಂದು ನಾಳೆ ಸಂಜೆ ಗೊತ್ತಾಗೊತ್ತೆ ಎಂದು ರಾಮ್ ದಾಸ್ ಹೇಳಿದ್ದಾರೆ.