Saturday, July 25, 2026
Homeರಾಜ್ಯಮೈಸೂರು : ಮೈಸೂರಿನಲ್ಲಿ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನಕ್ಕೆ ಚಾಲನೆ.

ಮೈಸೂರು : ಮೈಸೂರಿನಲ್ಲಿ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನಕ್ಕೆ ಚಾಲನೆ.

ಮೈಸೂರು : ಮೈಸೂರು ಅಂದರೆ ನೆನಪಾಗುವುದು ನಾಡದೇವತೆ ತಾಯಿ ಚಾಮುಂಡೇಶ್ವರಿ ಸಹಸ್ರಾರು ವರ್ಷಗಳಿಂದ ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ನೆಲೆಸಿರುವ ಚರಿತ್ರೆ ಇದೆ. ಆದರೆ ಜಿಲ್ಲೆಯಲ್ಲಿ ಮಹಿಳೆಯರ ಸುರಕ್ಷತೆ ಕಾಪಾಡಲು ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನಕ್ಕೆ ಚಾಲನೆ ನೀಡಲಾಗಿದೆ.

ಅರಮನೆ ನಗರಿಯಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರ ಶೋಷಣೆಗಳನ್ನು ನಿಯಂತ್ರಿಸಿ ಅವರ ರಕ್ಷಣೆಗಾಗಿ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನಕ್ಕೆ ನಗರ ಪೊಲೀಸ್​​​ ಆಯುಕ್ತ ರಮೇಶ್​​ ಬಾನೊತ್ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ DCP ಜಾಹ್ನವಿ, ಹಿರಿಯ ಪೊಲೀಸ್​​ ಅಧಿಕಾರಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಈ ಹಿಂದೆ ಹೊಸ ವರ್ಷದ ಸಮಯದಲ್ಲಿ ಮಹಿಳೆಯರ ಹಿತದೃಷ್ಟಿಯಿಂದ ಮೈಸೂರು ನಗರದಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ಎಂಟು ಚಾಮುಂಡಿ ಪಡೆ ರಚಿಸಲಾಗಿತ್ತು. ಈ ಮೂಲಕ ಯುವತಿಯರಿಗೆ ಕೀಟಲೆ ಮಾಡುವ ಪುಂಡರ ಹೆಡೆಮುರಿ ಕಟ್ಟಲಾಗಿತ್ತು.ಇದೀಗ ಇದೇ ನಿಟ್ಟಿನಲ್ಲಿ ಮಹಿಳೆಯರ ರಕ್ಷಣೆಗಾಗಿ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನಕ್ಕೆ ಚಾಲನೆ ನೀಡಲಾಗಿದೆ.

ಮೈಸೂರು ಅರಮನೆ ಕೋಟೆ ಆಂಜನೇಯ ದೇಗುಲ ಬಳಿ ಮೈಸೂರು ನಗರ ಪೊಲೀಸ್ ಇಲಾಖೆ ವಿನೂತನ ಕಾರ್ಯಕ್ರಮ ಆಯೋಜಿಸಿ ಮಹಿಳೆಯರ ಸುರಕ್ಷತೆಗಾಗಿ ಸುರಕ್ಷಾ ಪಡೆ ವಾಹನಗಳಿಗೆ ಚಾಲನೆ ನೀಡಿದೆ .ಮಹಿಳೆಯರ ಸುರಕ್ಷತೆ ಕಾಪಾಡಲು ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಗಸ್ತು ವಾಹನ ರಸ್ತೆಗಿಳಿದಿದೆ.

ಹೊಸ ವರ್ಷ ಆಚರಣೆ ವೇಳೆ ಮೈಸೂರು ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮಹಿಳೆಯರ ರಕ್ಷಣೆ ದೃಷ್ಟಿಯಿಂದ ಚಾಮುಂಡಿ ಪಡೆ ಕಾರ್ಯ ನಿರ್ವಹಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular