Saturday, July 25, 2026
Homeಜಿಲ್ಲೆಸುಳ್ಯ: ಚಿರತೆ ದಾಳಿಗೆ ಕರು, 3 ಮೇಕೆ ಬಲಿ.

ಸುಳ್ಯ: ಚಿರತೆ ದಾಳಿಗೆ ಕರು, 3 ಮೇಕೆ ಬಲಿ.

ಸುಳ್ಯ : ಸುಳ್ಯದ ಅಡ್ಡಬಾಳೆ ಎಂಬಲ್ಲಿ ಚಿರತೆ ದಾಳಿಗೆ ಒಂದು ಕರು ಮತ್ತು ಮೂರು ಮೇಕೆಗಳು ಬಲಿಯಾದ ಘಟನೆ ನಡೆದಿದೆ.

ಭಾನುವಾರ ಕರುವನ್ನು ಮೇಯಲು ಬಿಟ್ಟಿದ್ದ ಸ್ಥಳೀಯ ನಿವಾಸಿ ಲೀಲಾವತಿ ಸಂಜೆ ವೇಳೆಗೆ ಅದು ಮೃತಪಟ್ಟಿರುವುದು ಕಂಡು ಬಂದಿದ್ದು, ಚಿರತೆ ಕರುವನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.

ಚಿರತೆ ದಾಳಿಗೆ ಶನಿವಾರ ರಾತ್ರಿ ಲೀಲಾವತಿ ಎಂಬುವರ ಶೆಡ್‌ನಲ್ಲಿದ್ದ ಮೂರು ಮೇಕೆಗಳು ಸಾವನ್ನಪ್ಪಿದ್ದವು. ಕಳೆದ ಹಲವು ದಿನಗಳಿಂದ ನಿರಂತರ ಚಿರತೆ ದಾಳಿ ನಡೆಯುತ್ತಿದ್ದು ಇದರ ಬಗ್ಗೆ ಅರಣ್ಯ ಇಲಾಖೆ ಯಾವುದೇ ಕ್ರಮ ತೆಗೆಯದೆ ಇರುವುದು ಬೇಸರದ ಸಂಗತಿ ಎಂದು ಸ್ಥಳೀಯ ನಿವಾಸಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular