ಉಳ್ಳಾಲ:ಫೆ.24 ರೈತನ ಸರ್ವತೋಮುಖ ಅಭಿವೃದ್ಧಿಗೆ ನಗರದ ಮೂಲಭೂತ ಸೌಕರ್ಯಗಳು ಹಳ್ಳಿಗಳಿಗೂ ವ್ಯಾಪಿಸಬೇಕು.ಆಗ ರೈತರು ನಗರಗಳಿಗೆ ವಲಸೆ ಹೋಗೋದು ತಪ್ಪುತ್ತೆ.ರೈತರಿಗೆ ಆತ್ಮ ವಿಶ್ವಾಸ ತುಂಬೋ ಕಾರ್ಯ ಸರಕಾರ ಮಾಡಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಎಸ್.ಡಿ. ಸಂಪತ್ ಸಾಮ್ರಾಜ್ಯ ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಕಾಪಿಕಾಡ್ ,ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್ ಇದರ ಆಶ್ರಯ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಕಾಪಿಕಾಡ್ ನಲ್ಲಿ ಗುರುವಾರ ನಡೆದ ಗೇರು ಮೇಳ ಮತ್ತು ವಿಚಾರ ಸಂಕಿರಣ- 2023 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.ಕೃಷಿಯಲ್ಲಿ ಪ್ರಗತಿ ಕಾಣಲು ಇಂದು ಹವಾಮಾನ ವೈಪರೀತ್ಯವೇ ದೊಡ್ಡ ಸಮಸ್ಯೆಯಾಗಿದೆ.ಹವಾಮಾನವನ್ನ ಸರಿದೂಗಿಸಲು ನಮ್ಮೆಲ್ಲರ ಪಾತ್ರ ಅಗತ್ಯ ಎಂದರು.
ಪ್ರಗತಿಪರ ಕೃಷಿಕರಾದ ಮೂಡಬಿದ್ರೆ ಬೊವೀಂದ ಬೆಟ್ಟುವಿನ ಬ್ಯಾಪ್ಟಿಸ್ಟ್ ಡಿಸೋಜ, ಪೂತ್ತೂರು ಬಲ್ನಾಡುವಿನ ಬಿ. ಸುರೇಶ್ ,ಮೂಡಬಿದ್ರೆ ಬೆಳುವಾಯಿಯ ರಾಮಕೃಷ್ಣ ಜೆ. ಶೆಣೈ, ಬೆಳ್ತಂಗಡಿ ಪೊರ್ಕಳದ ಸುಜಾತ ಎನ್ ರೈ, ಹೆಬ್ರಿ ಅಜೆಕಾರುವಿನ ಸಿವಸಂಕರ ಪಿ. ವಿ ಇವರನ್ನು ಸನ್ಮಾನಿಸಲಾಯಿತು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಮೃತ್ಯುಂಜಯ ಸಿ ವಾಲಿ ಗೇರು ಮೇಳ ವಿಚಾರ ಸಂಕಿರಣವನ್ನ ಉದ್ಘಾಟಿಸಿದರು.ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಸಂಘದ ಅಧ್ಯಕ್ಷರಾದ ಡಿ.ಗೋಪಿನಾಥ ಕಾಮತ್, ಮಂಗಳೂರು ಕೃಷಿ ಇಲಾಖೆ ಇದರ ಜಂಟಿ ಕೃಷಿ ನಿರ್ದೇಶಕರಾದ ಡಾ. ಕೆ.ಕೆಂಪೇಗೌಡ, ತೋಟಗಾರಿಕೆ ಇಲಾಖೆಯ ಕೆ.ಪ್ರವೀಣ್ , ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಧನಕೀರ್ತಿ ಬಲಿಪ, ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ,ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ರವಿರಾಜ್ ಶೆಟ್ಟಿ ಜಿ.ಸಹ ಸಂಶೋಧನಾ ನಿರ್ದೇಶಕರಾದ ಡಾ. ಲಕ್ಷ್ಣಣ, ಪ್ರವೀಣ್ ಎಸ್. ಕುಂಪಲ ಮೊದಲಾದವರು ಉಪಸ್ಥಿತರಿದ್ದರು.