Saturday, August 1, 2026
Homeರಾಜ್ಯಮಂಡ್ಯ ; ಶ್ರೀರಂಗಪಟ್ಟಣದ ಬಲಮುರಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು.

ಮಂಡ್ಯ ; ಶ್ರೀರಂಗಪಟ್ಟಣದ ಬಲಮುರಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು.

ಮಂಡ್ಯ : ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾದ ದುರ್ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿ ಬಳಿ ನಡೆದಿದೆ.

ಮೈಸೂರಿನ ಕೆಲ್ಲಹಳ್ಳಿಯ ರವಿಚಂದ್ರ (21) ಹಾಗೂ ಚಾಮರಾಜನಗರದ ಕಮರವಾಡಿ ನಿವಾಸಿ ಮೋಹನ್ (21) ಮೃತ ಯುವಕರು ಎಂದು ಗುರುತಿಸಲಾಗಿದೆ.

ನಿನ್ನೆ ಸಂಜೆ ಮೂವರು ಸ್ನೇಹಿತರು ಪ್ರವಾಸಕ್ಕಾಗಿ ಬಲಮುರಿಗೆ ಬಂದಿದ್ದು, ಈ ವೇಳೆ ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದರು. ಈ ಸಂದರ್ಭ ಇಬ್ಬರು ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದರು.

ಸ್ಥಳೀಯ ಈಜುಗಾರರ ಸಹಾಯದಿಂದ ನಿನ್ನೆ ಓರ್ವ ಯುವಕನ ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಲಾಗಿತ್ತು. ಇಂದು ಬೆಳಿಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತೋರ್ವ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ.

ಈ ಘಟನೆ ಕೆ.ಆ‌ರ್.ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular