Saturday, October 10, 2026
Homeಜಿಲ್ಲೆಮಂಡ್ಯ : ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚೆಯ್ಯಂಡ ಅರುಣಾ ತಿಮ್ಮಯ್ಯ ಅನಾರೋಗ್ಯದಿಂದ ನಿಧನ !

ಮಂಡ್ಯ : ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚೆಯ್ಯಂಡ ಅರುಣಾ ತಿಮ್ಮಯ್ಯ ಅನಾರೋಗ್ಯದಿಂದ ನಿಧನ !

ಮಂಡ್ಯ : ಮಂಡ್ಯ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ (Additional SP) ಸೇವೆ ಸಲ್ಲಿಸುತ್ತಿದ್ದ ಚೆಯ್ಯಂಡ ಅರುಣಾ ತಿಮ್ಮಯ್ಯ (57) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕೊಡಗು ಜಿಲ್ಲೆಯ ಬಲಮುರಿ ಗ್ರಾಮದವರಾದ ಅರುಣಾ ತಿಮ್ಮಯ್ಯ ಅವರು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ನಿಧನದಿಂದ ಪೊಲೀಸ್ ಇಲಾಖೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಮಂಡ್ಯದಲ್ಲಿ ಅಂತಿಮ ದರ್ಶನ, ಮೈಸೂರಿನಲ್ಲಿ ಅಂತ್ಯಕ್ರಿಯೆ

ನಿಧನರಾದ ಪೊಲೀಸ್ ಅಧಿಕಾರಿಯ ಅಂತಿಮ ದರ್ಶನಕ್ಕೆ ಮಂಡ್ಯದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಮೈಸೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಚೆಯ್ಯಂಡ ಅರುಣಾ ತಿಮ್ಮಯ್ಯ ಅವರ ನಿಧನಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹಾರೈಸಿದ್ದಾರೆ. ಚೆಯ್ಯಂಡ ಅರುಣಾ ತಿಮ್ಮಯ್ಯ ಅವರ ನಿಧನಕ್ಕೆ ಹೃತ್ಪೂರ್ವಕ ಸಂತಾಪಗಳು.

RELATED ARTICLES

LEAVE A REPLY

Please enter your comment!
Please enter your name here

Most Popular