ಮಂಗಳೂರು : KSTA ಕರ್ನಾಟಕ ಟೈಲರ್ ಅಸೋಸಿಯೇಷನ್ (ರಿ) ಮಂಗಳಾದೇವಿ ವಲಯ ಸಮಿತಿಯ ವತಿಯಿಂದ 27 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಟೈಲರ್ ಕುಟುಂಬಸ್ಥರಿಗೆ ಸುಖ-ಶಾಂತಿ ನೆಲೆಸುವ ಉದ್ದೇಶದಿಂದ ಗೋರಿಗುಡ್ಡದಲ್ಲಿರುವ ಪ್ರಧಾನ ಕಚೇರಿ “ಟೈಲರ್ ಭವನ”ದಲ್ಲಿ ಸತ್ಯನಾರಾಯಣ ಪೂಜೆ ಭಕ್ತಿಭಾವದಿಂದ ನೆರವೇರಿತು.







ಕಾರ್ಯಕ್ರಮದಲ್ಲಿ ಕರ್ನಾಟಕ ಟೈಲರ್ ಅಸೋಸಿಯೇಷನ್ನ ರಾಜ್ಯಾಧ್ಯಕ್ಷರು, ಸ್ಥಾಪಕ ಸದಸ್ಯರು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದರು. ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಆಹ್ವಾನಿತರು ಪೂಜೆಯಲ್ಲಿ ಪಾಲ್ಗೊಂಡು ಸಂಘದ 27 ವರ್ಷಗಳ ಸೇವಾ ಪಯಣವನ್ನು ಸ್ಮರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಂಘದ ಬೆಳವಣಿಗೆಗೆ ಸಹಕರಿಸಿದ ಹಿರಿಯ ಸದಸ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ವಾರ್ಷಿಕೋತ್ಸವ ಅಂಗವಾಗಿ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗುತ್ತಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ವಲಯ ಅಧ್ಯಕ್ಷೆ ಸುಜಾತಾ ಜೋಗಿ, ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿ ನಳಿನಿ ಸದಾಶಿವ, ಕೋಶಾಧಿಕಾರಿ ಹರಿಣಾಕ್ಷಿ, ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ್ ಬಜಾಲ್, ಪದಾಧಿಕಾರಿಗಳಾದ ಅಶೋಕ್, ಸಬಿತಾ ಸತೀಶ್, ಸುಜಾತಾ ಜೋಗಿ, ಹಿರಿಯ ಸದಸ್ಯರಾದ ಸೀತಾರಾಮ್ ಅಮೀನ್, ಪದ್ಮನಾಭ ಜಲ್ಲಿಗುಡ್ಡೆ, ವಲಯ ಉಪಾಧ್ಯಕ್ಷ ಅನಂತ್ ರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


