ಮಂಗಳೂರು ; ಸುರತ್ಕಲ್ ಫಾಝೀಲ್ ನ ಸಹೋದರನ ಮೇಲೆ ಹಲ್ಲೆ ಪ್ರಕರಣ ಹಿನ್ನೆಲೆ , ಫಾಝೀಲ್ ತಂದೆ ಉಮರ್ ಫಾರೂಕ್ ಹೇಳಿಕೆ ನೀಡಿದ್ದಾರೆ.
ನನ್ನ ಮಗ ಆದಿಲ್ ಫಾಝೀಲ್ ಕೇಸ್ ಸಂಬಂಧ ಉಳ್ಳಾಲಕ್ಕೆ ತೆರಳಿದ್ದ
ಉಳ್ಳಾಲದಿಂದ ಮರಳಿಬರುವಾಗ ಗಣೇಶಪುರದಲ್ಲಿ ಸ್ಕೂಟರ್ ಗೆ ತಾಗಿಸುವಂತೆ ಮಾಡಿ ಹಲ್ಲೆ ಮಾಡಲಾಗಿದೆ,ನಾಲ್ಕೈದು ಮಂದಿ ಆದಿಲ್ ಗೆ ಹೊಡೆದಿದ್ದಾರೆ.ಇದು ಪ್ರೀ ಪ್ಲಾನ್ಡ್ ಮರ್ಡರ್ ಅಟೆಂಪ್ಟ್ ಅವರ ಕೈಯಲ್ಲಿ ಆಯುಧಗಳೂ ಇತ್ತು ಅಂತಾ ಮಗ ಹೇಳಿದ್ದಾನೆ, ಇದರಿಂದ ಆದಿಲ್ ದವಡೆ,ಎದೆಗೆ ಹಲ್ಲೆ ಮಾಡಿದ್ದಾರೆ.
ಶರಣ್ ಪಂಪ್ವೆಲ್ ಹೇಳಿಕೆ ನೀಡುವಾಗಲೇ ಒಳಗೆ ಹಾಕಬೇಕಿತ್ತು
ಆದಿಲ್ ತಂದೆ ಉಮರ್ ಫಾರೂಕ್ ಹೇಳಿದ್ದಾರೆ ,ಸಮಾಜದಲ್ಲಿ ಅಶಾಂತಿ ಯ ವಾತವರಣ ಸೃಷ್ಟಿ ಸುವವರನ್ನು ಒಳಗೆ ಹಾಕಬೇಕು ಎಂದಿದ್ದಾರೆ.
ನಿನ್ನೆ ರಾತ್ರಿ ಗಣೇಶಪುರ ಜಂಕ್ಷನ್ ನಲ್ಲಿ ಕಾರು-ಬೈಕ್ ಡಿಕ್ಕಿಯಾಗಿತ್ತು ಈ ವೇಳೆ ಇತ್ತಂಡಗಳಿಂದಲೂ ಮಾತಿನ ಚಕಮಕಿಯಾಗಿತ್ತು ,ಇತ್ತಂಡಗಳಿಂದಲೂ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಆದಿಲ್ ಅವ್ಯಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿರೋದಾಗಿ ದೂರು ನೀಡಿದ್ದಾರೆ.