Friday, September 25, 2026
Homeಜಿಲ್ಲೆಮಂಗಳೂರು : ಮೈಸೂರು ದಸರಾಗೆ ಕಂಬಳದ ಮೆರುಗು : ಅ.18–19ರಂದು ಪ್ರಪ್ರಥಮ ಕಂಬಳ ಉತ್ಸವ,ತುಳುನಾಡು–ಕರುನಾಡಿನ ಸಾಂಸ್ಕೃತಿಕ...

ಮಂಗಳೂರು : ಮೈಸೂರು ದಸರಾಗೆ ಕಂಬಳದ ಮೆರುಗು : ಅ.18–19ರಂದು ಪ್ರಪ್ರಥಮ ಕಂಬಳ ಉತ್ಸವ,ತುಳುನಾಡು–ಕರುನಾಡಿನ ಸಾಂಸ್ಕೃತಿಕ ಬಾಂಧವ್ಯಕ್ಕೆ ಹೊಸ ಬಲ.

ಮಂಗಳೂರು : ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಕಂಬಳ ಉತ್ಸವ ಆಯೋಜಿಸಲಾಗುತ್ತಿದೆ. ಅಕ್ಟೋಬರ್ 18 ಮತ್ತು 19ರಂದು ಸಾತಗಳ್ಳಿ ಹೊರವರ್ತುಲ ರಸ್ತೆಯ ಪ್ರಾದೇಶಿಕ ಕೇಂದ್ರದ ಸಮೀಪ ಕಂಬಳ ನಡೆಯಲಿದೆ ಎಂದು ಪುತ್ತೂರು ಶಾಸಕ ಹಾಗೂ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

oplus_0

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 20 ಎಕರೆ ಪ್ರದೇಶದಲ್ಲಿ ಕಂಬಳದ ಕರೆ ನಿರ್ಮಿಸಲಾಗುತ್ತಿದ್ದು, ಏಕಕಾಲದಲ್ಲಿ 15 ಸಾವಿರ ಮಂದಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

150–160 ಜೋಡಿ ಕೋಣಗಳು ಸ್ಪರ್ಧೆಗೆ.

ಮೈಸೂರು ಕಂಬಳದಲ್ಲಿ 150ರಿಂದ 160 ಜೋಡಿ ಆಯ್ದ ಕೋಣಗಳನ್ನು ಸ್ಪರ್ಧೆಗೆ ಕರೆತರಲು ಉದ್ದೇಶಿಸಲಾಗಿದೆ. ಅಕ್ಟೋಬರ್ 15ರಂದು ಪ್ರಾಯೋಗಿಕ ಓಟ ನಡೆಸಲಾಗುವುದು. ಅಕ್ಟೋಬರ್ 16ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕೋಣಗಳು ಮೈಸೂರಿನತ್ತ ಪ್ರಯಾಣಿಸಲಿವೆ.
ಅಕ್ಟೋಬರ್ 18ರಂದು ಕಂಬಳಕ್ಕೆ ಚಾಲನೆ ನೀಡಲಾಗಿದ್ದು, ಅಕ್ಟೋಬರ್ 19ರಂದು ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ.

ದೊಡ್ಡ ಜೋಡಿಗೆ ₹65 ಸಾವಿರ ಬಹುಮಾನ : ಕಂಬಳದಲ್ಲಿ ದೊಡ್ಡ ಜೋಡಿ ಕೋಣಗಳಿಗೆ ₹65 ಸಾವಿರ ಹಾಗೂ ಚಿಕ್ಕ ಜೋಡಿಗೆ ₹50 ಸಾವಿರ ಬಹುಮಾನ ನಿಗದಿಪಡಿಸಲಾಗಿದೆ. ಕಂಬಳ ವೀಕ್ಷಿಸಲು ಸಾರ್ವಜನಿಕರಿಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.

ಕರಾವಳಿ ಆಹಾರ ಸಂಸ್ಕೃತಿಗೆ ವಿಶೇಷ ಮಳಿಗೆ ಮೈಸೂರು ದಸರಾ ಸಂದರ್ಭ ಕಂಬಳದ ಜೊತೆಗೆ ದಕ್ಷಿಣ ಕನ್ನಡದ ಕರಾವಳಿ ಆಹಾರ ಸಂಸ್ಕೃತಿಯನ್ನು ಪರಿಚಯಿಸುವ ವಿಶೇಷ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗುವುದು. ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕಂಬಳವು ತುಳುನಾಡಿನ ವೀರಕ್ರೀಡೆ ಹಾಗೂ ಜಾನಪದ ಕ್ರೀಡೆಯಾಗಿದ್ದು, ಮೈಸೂರು ದಸರಾ ಮೂಲಕ ತುಳುನಾಡು ಮತ್ತು ಕರುನಾಡಿನ ಸಾಂಸ್ಕೃತಿಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಂಬಳ ಸಮಿತಿಯ ಪದಾಧಿಕಾರಿಗಳು ಹಾಗೂ ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular