Saturday, September 26, 2026
Homeಜಿಲ್ಲೆಮಂಗಳೂರು : ಮಲ್ಲಿಕಟ್ಟೆ ಪಾರ್ಕ್‌ನಿಂದ ಕದ್ರಿ ಗೋಪಾಲನಾಥರ ಸ್ಯಾಕ್ಸೋಫೋನ್ ಪ್ರತಿಕೃತಿ ಕಳವು.

ಮಂಗಳೂರು : ಮಲ್ಲಿಕಟ್ಟೆ ಪಾರ್ಕ್‌ನಿಂದ ಕದ್ರಿ ಗೋಪಾಲನಾಥರ ಸ್ಯಾಕ್ಸೋಫೋನ್ ಪ್ರತಿಕೃತಿ ಕಳವು.

ಮಂಗಳೂರು : ನಗರದ ಮಲ್ಲಿಕಟ್ಟೆ ಪಾರ್ಕ್‌ನಲ್ಲಿbಅಳವಡಿಸಲಾಗಿದ್ದ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ ಅವರ ನೆನಪಿನ ಸ್ಯಾಕ್ಸೋಫೋನ್ ಪ್ರತಿಕೃತಿ ಕಳವು ಮಾಡಲಾಗಿದೆ.

ಸುಮಾರು ₹75 ಲಕ್ಷ ವೆಚ್ಚದಲ್ಲಿ ಕೆಲವು ವರ್ಷಗಳ ಹಿಂದೆ ಮಲ್ಲಿಕಟ್ಟೆ ಪಾರ್ಕ್‌ ಅಭಿವೃದ್ಧಿಪಡಿಸಲಾಗಿತ್ತು. ಈ ವೇಳೆ ಕದ್ರಿ ಗೋಪಾಲನಾಥ ಅವರ ಸ್ಮರಣಾರ್ಥ ಪೀಠವೊಂದನ್ನು ನಿರ್ಮಿಸಿ, ಗಾಜಿನ ಬಾಕ್ಸ್‌ನಲ್ಲಿ ಸ್ಯಾಕ್ಸೋಫೋನ್ ಪ್ರತಿಕೃತಿಯನ್ನು ಇರಿಸಲಾಗಿತ್ತು. ಪಾರ್ಕ್‌ಗೆ ಆಗಮಿಸುವ ಸಾರ್ವಜನಿಕರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿತ್ತು.ಆದರೆ ಇತ್ತೀಚಿನ ವರ್ಷಗಳಲ್ಲಿ ಅನುದಾನದ ಕೊರತೆಯಿಂದ ಪಾರ್ಕ್‌ ನಿರ್ವಹಣೆ ಸಮರ್ಪಕವಾಗಿ ನಡೆಯದೆ ಪಾಳುಬಿದ್ದ ಸ್ಥಿತಿಯಲ್ಲಿತ್ತು. ಇದೇ ಸಂದರ್ಭದಲ್ಲಿ ವಾರದ ಹಿಂದೆ ಸ್ಯಾಕ್ಸೋಫೋನ್ ಪ್ರತಿಕೃತಿಯನ್ನು ಯಾರೋ ಕಳವು ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿ ಅವರು ಕದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದು, ಇದುವರೆಗೆ ಆರೋಪಿಗಳ ಸುಳಿವು ಪತ್ತೆಯಾಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

Most Popular