ಮಂಗಳೂರು : ಅಯ್ಯೋಧ್ಯೆ ಶ್ರೀರಾಮನ ದರ್ಶನ ಪಡೆಯಲು ನಿನ್ನೆ ಸಂಜೆ 1400 ಯಾತ್ರಾರ್ಥಿಗಳನ್ನು ಹೊತ್ತು ಮಂಗಳೂರಿನಿಂದ ಅಯ್ಯೋಧ್ಯೆ ಗೆ ವಿಶೇಷ ರೈಲು ಹೊರಟಿದೆ.

ಫೆಬ್ರವರಿಯಲ್ಲಿ ಭಗವಾನ್ ರಾಮನ ದರ್ಶನ ಪಡೆಯಲು 20,000 ಭಕ್ತರು ಕರ್ನಾಟಕದಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ, ಸಾರಿಗೆಗಾಗಿ 12 ರೈಲುಗಳನ್ನು ಬಳಸಿಕೊಂಡಿದ್ದುಈ ಮಾಹಿತಿಯನ್ನು ಅಭಿಯಾನದ ರಾಜ್ಯ ಸಂಚಾಲಕ ಜಗದೀಶ ಹಿರೇಮನಿ ತಿಳಿಸಿದ್ದಾರೆ.

ಭಾರತೀಯ ಜನತಾ ಪಕ್ಷವು (ಬಿಜೆಪಿ) ಅಯೋಧ್ಯೆಗೆ ಭೇಟಿ ನೀಡಲು ಆಸಕ್ತಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೆ ಖರ್ಚುವೆಚ್ಚಗಳನ್ನು ಪಕ್ಷದಿಂದಲೇ ಆಯೋಜಿಸಲಾಗಿದೆ. ಈ ಉದ್ದೇಶಕ್ಕಾಗಿ ಆಸ್ತಾ ಹೆಸರಿನ ವಿಶೇಷ ರೈಲುಗಳನ್ನು ನಿಗದಿಪಡಿಸಲಾಗಿದ್ದು,ಲೋಕಸಭೆ ಚುನಾವಣೆ ಮುಗಿದ ನಂತರ ಎರಡನೇ ಹಂತದ ರೈಲು ಆರಂಭವಾಗಲಿದೆ ಎಂದು ಜಗದೀಶ್ ತಿಳಿಸಿದ್ದಾರೆ.

ಮೊದಲ ಹಂತದ ಕೊನೆಯ ರೈಲಿನಲ್ಲಿದ್ದ 1400 ಯಾತ್ರಾರ್ಥಿಗಳಲ್ಲಿ 640 ಮಂದಿ ದಕ್ಷಿಣ ಕನ್ನಡದಿಂದ, 400 ಮಂದಿ ಉಡುಪಿ ಜಿಲ್ಲೆಯಿಂದ ಮತ್ತು ಉಳಿದವರು ಉತ್ತರ ಕನ್ನಡ ಜಿಲ್ಲೆಯಿಂದ ಬಂದವರು. ಬುಧವಾರ ಮಂಗಳೂರಿನಿಂದ ಹೊರಡುವ ರೈಲು ಮಾರ್ಚ್ 9 ರಂದು ಅಯೋಧ್ಯೆಗೆ ತಲುಪಲಿದೆ ಮಾರ್ಚ್ 10 ರಂದು ಹಿಂದಿರುಗುವ ಪ್ರಯಾಣವನ್ನು ನಿಗದಿಪಡಿಸಲಾಗಿದ್ದು ರೈಲು ಮಾರ್ಚ್ 13 ರಂದು ಮಂಗಳೂರಿಗೆ ಮರಳುವ ನಿರೀಕ್ಷೆಯಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಅಭಿಯಾನದ ರಾಜ್ಯ ಸಹ ಸಂಚಾಲಕ ವಿಜಯೇಂದ್ರ, ದ.ಕ.ಜಿಲ್ಲಾ ಸಂಚಾಲಕಿ ಕಸ್ತೂರಿ ಪಂಜ, ರಾಮದಾಸ್ ಬಂಟ್ವಾಳ, ದೇವದಾಸ ಶೆಟ್ಟಿ ಉಪಸ್ಥಿತರಿದ್ದರು.


