Monday, July 13, 2026
Homeಜಿಲ್ಲೆಮಂಗಳೂರು : ಮಂಗಳೂರಿನಲ್ಲಿ ಜೂ .15 ರಂದು ಅತ್ಯಾಧುನಿಕ ಸೌಲಭ್ಯದ ಅಭಿಸರಣ್ ಅಕ್ವಾಟಿಕ್ ಸೆಂಟರ್ ಲೋಕಾರ್ಪಣೆ.

ಮಂಗಳೂರು : ಮಂಗಳೂರಿನಲ್ಲಿ ಜೂ .15 ರಂದು ಅತ್ಯಾಧುನಿಕ ಸೌಲಭ್ಯದ ಅಭಿಸರಣ್ ಅಕ್ವಾಟಿಕ್ ಸೆಂಟರ್ ಲೋಕಾರ್ಪಣೆ.

ಮಂಗಳೂರು : ನಗರದ ಬಂಗ್ರಕೂಳೂರು, ತ್ರಿಶಾ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸಮೀಪದ ಮಲಾಡಿ ಎಸ್ಟೇಟ್ ರಸ್ತೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿಸರಣ್ ಅಕ್ವಾಟಿಕ್ ಸೆಂಟರ್ ಆರಂಭಗೊಂಡಿದೆ.ಇದರ ಲೋಕಾರ್ಪಣೆ ಜೂಲೈ 15 ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಓಲಿಂಪಿಕ್ಸ್ ಈಜುಗಾರ್ತಿ ಶಿವಾನಿ ಕಠಾರಿಯರವರು ಆಗಮಿಸಲಿದ್ದಾರೆ ಎಂದು ಸಂಕೇತ್ ಬೆಂಗರೆಯವರು ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅರೋಗ್ಯ ಸಚಿವರಾದ ಯು ಟಿ ಖಾದರ್ ಫರೀದ್, ಅಧ್ಯಕ್ಷತೆಯನ್ನು ನಾಡೋಜ ಡಾ. ಜಿ. ಶಂಕರ್, ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಸಂಸದರು ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಜಿಲ್ಲಾಧಿಕಾರಿ ದರ್ಶನ್ ಎಚ್. ವಿ, ಜಯ ಸಿ ಕೋಟ್ಯಾನ್, ಸಂಜಯ್ ಸುವರ್ಣ, ಸುಮಂಗಲ, ಕಿರಣ್ ಕುಮಾರ್, ಅನಿಲ್ ಕುಮಾರ್ ರವರು ಉಪಸ್ಥಿತರಿರುವರು.

ಎಲ್ಲಾ ವಯೋಮಾನದವರಿಗೆ ಸುರಕ್ಷಿತ, ವೃತ್ತಿಪರ ಹಾಗೂ ವೈಜ್ಞಾನಿಕ ಈಜು ತರಬೇತಿ ನೀಡುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೇಂದ್ರದಲ್ಲಿ 25 ಮೀಟರ್ ಅಂತರರಾಷ್ಟ್ರೀಯ ಮಾನದಂಡದ ಶಾರ್ಟ್ ಕೋರ್ಸ್, 10 ಲೇನ್‌ಗಳ ಈಜುಕೊಳ ನಿರ್ಮಿಸಲಾಗಿದ್ದು, ಸ್ಪರ್ಧಾತ್ಮಕ ಹಾಗೂ ವೃತ್ತಿಪರ ತರಬೇತಿಗೆ ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ನೀರಿನ ಶುದ್ಧತೆ ಹಾಗೂ ಸುರಕ್ಷತೆಯನ್ನು ಕಾಪಾಡಲು ಅತ್ಯಾಧುನಿಕ ಫಿಲ್ಟ್ರೇಶನ್ ವ್ಯವಸ್ಥೆ ಅಳವಡಿಸಲಾಗಿದ್ದು, ಅಂತರರಾಷ್ಟ್ರೀಯ ಸ್ವಚ್ಛತಾ ಮಾನದಂಡಗಳಿಗೆ ಅನುಗುಣವಾಗಿ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ.
ಕೇಂದ್ರದಲ್ಲಿ ಸುಮಾರು 45–50 ಕಾರುಗಳ ಪಾರ್ಕಿಂಗ್, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಧುನಿಕ ಚೇಂಜಿಂಗ್ ರೂಮ್‌ಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಕಾರ್ಯನಿರ್ವಹಣೆಯ ಅವಧಿಯಿಡೀ ತರಬೇತಿ ಪಡೆದ ಜೀವರಕ್ಷಕರು ಕರ್ತವ್ಯದಲ್ಲಿರಲಿದ್ದು, AUSTSWIM, ASCA ಹಾಗೂ NIS ಪ್ರಮಾಣಿತ ತರಬೇತುದಾರರು ಗುಣಮಟ್ಟದ ಈಜು ತರಬೇತಿ ನೀಡಲಿದ್ದಾರೆ.

ಮಕ್ಕಳು, ಮಹಿಳೆಯರು, ವಯಸ್ಕರು ಹಾಗೂ ಹಿರಿಯ ನಾಗರಿಕರಿಗೆ ಪ್ರತ್ಯೇಕ Learn-to-Swim ಕಾರ್ಯಕ್ರಮಗಳು, ಆರಂಭಿಕರಿಂದ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಸಿದ್ಧಗೊಳ್ಳುವ ಈಜುಪಟುಗಳವರೆಗೆ ವಿವಿಧ ಹಂತಗಳ ತರಬೇತಿಗಳನ್ನು ನಡೆಸಲಾಗುತ್ತದೆ. ಮಹಿಳೆಯರಿಗಾಗಿ ಪ್ರತಿದಿನ ಮಧ್ಯಾಹ್ನ 3.00ರಿಂದ 4.00 ಗಂಟೆಯವರೆಗೆ ವಿಶೇಷ ಈಜು ಅವಧಿ ಮೀಸಲಿರಿಸಲಾಗಿದೆ.

ಸಮುದ್ರದೊಂದಿಗೆ ಜೀವನಪರ್ಯಂತ ನಂಟು ಹೊಂದಿರುವ ಶಶಿಕುಮಾರ್ ಅವರು ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಈಜು ಸೌಲಭ್ಯ ನಿರ್ಮಿಸಬೇಕೆಂಬ ಕನಸನ್ನು ನನಸಾಗಿಸಿದ್ದು, ಶ್ರೀಮತಿ ಸಬಿತಾ ಎಸ್. ಕುಮಾರ್ ಅವರ ನಿರಂತರ ಬೆಂಬಲ ಈ ಕೇಂದ್ರದ ಯಶಸ್ಸಿಗೆ ಪ್ರಮುಖ ಆಧಾರವಾಗಿದೆ.

ಕೇಂದ್ರದ ಸಂಸ್ಥಾಪಕರಾದ ಸಂಕೇತ್ ಬೆಂಗ್ರೆ ಹಾಗೂ ಶಿಲ್ಪಾ ಬೆಂಗ್ರೆ ಇಬ್ಬರೂ ರಾಷ್ಟ್ರೀಯ ಮಟ್ಟದ ಪದಕ ವಿಜೇತ ಈಜುಪಟುಗಳು ಹಾಗೂ ಅಂತರರಾಷ್ಟ್ರೀಯ ಮಟ್ಟದ ಅನುಭವ ಹೊಂದಿರುವ ಪ್ರಮಾಣಿತ ತರಬೇತುದಾರರಾಗಿದ್ದಾರೆ.

ಕೇಂದ್ರದ ಕಾರ್ಯನಿರ್ವಹಣೆಯ ಸಮಯ:

ಬೆಳಿಗ್ಗೆ: 6.00 ರಿಂದ 10.00 ಗಂಟೆ
ಸಂಜೆ: 3.00 ರಿಂದ 8.00 ಗಂಟೆ
ಮಹಿಳೆಯರಿಗೆ ವಿಶೇಷ ಅವಧಿ: ಮಧ್ಯಾಹ್ನ 3.00 ರಿಂದ 4.00 ಗಂಟೆ ಮಂಗಳೂರನ್ನು ಜಲಕ್ರೀಡೆ ಹಾಗೂ ಜಲಸುರಕ್ಷತಾ ಶಿಕ್ಷಣದ ಪ್ರಮುಖ ಕೇಂದ್ರವನ್ನಾಗಿ ರೂಪಿಸಿ, ಉತ್ತಮ ಈಜುಗಾರರು, ತರಬೇತಿ ಪಡೆದ ಜೀವರಕ್ಷಕರು ಹಾಗೂ ರಾಷ್ಟ್ರೀಯ–ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಬೆಳೆಸುವುದು ಅಭಿಸರಣ್ ಅಕ್ವಾಟಿಕ್ ಸೆಂಟರ್‌ನ ಪ್ರಮುಖ ಧ್ಯೇಯವಾಗಿದೆ.

ಪತ್ರಿಕಾಗೋಷ್ಟಿಯಲ್ಲಿ ಶಶಿಕುಮಾರ್ ಬೆಂಗ್ರೆ, ಶಿಲ್ಪಾ ಬೆಂಗ್ರೆ, ಸಭಿತ ಬೆಂಗರೆಯವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular