Saturday, July 25, 2026
Homeಜಿಲ್ಲೆಮಂಗಳೂರು : ನೂತನ ಪೊಲೀಸ್ ಕಮಿಷನರ್ ಅನುಪಾಲ್ ಅಗರ್ವಾಲ್ ಅಧಿಕಾರ ಸ್ವೀಕಾರ; ನಗರವನ್ನು ಡ್ರಗ್ಸ್ ಮುಕ್ತ...

ಮಂಗಳೂರು : ನೂತನ ಪೊಲೀಸ್ ಕಮಿಷನರ್ ಅನುಪಾಲ್ ಅಗರ್ವಾಲ್ ಅಧಿಕಾರ ಸ್ವೀಕಾರ; ನಗರವನ್ನು ಡ್ರಗ್ಸ್ ಮುಕ್ತ ಮಾಡುವುದಾಗಿ ಭರವಸೆ.

ಮಂಗಳೂರು : ಮಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಅನುಪಮ್ ಅಗರ್ವಾಲ್ ಅವರು ಸೆಪ್ಟೆಂಬರ್ 7, ಗುರುವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅನುಪಮ್ ಅಗರ್ವಾಲ್, ಮಂಗಳೂರನ್ನು ಡ್ರಗ್ಸ್ ಮುಕ್ತ ಮಾಡುವ ಉದ್ದೇಶದಿಂದ ಅಭಿಯಾನವನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು. ಈ ದಿಸೆಯಲ್ಲಿ ನಿರ್ಗಮಿತ ಆಯುಕ್ತರು ಮಾಡಿರುವ ಉತ್ತಮ ಪ್ರಯತ್ನವನ್ನು ಶ್ಲಾಘಿಸಿದರು. ಅಧಿಕಾರಿಗಳ ಸಹಕಾರದೊಂದಿಗೆ ಈ ಕಾರ್ಯವನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು.

ಅನೈತಿಕ ಪೊಲೀಸ್ ಗಿರಿಯನ್ನು ಆಶ್ರಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನೂತನ ಆಯುಕ್ತರು ಭರವಸೆ ನೀಡಿದರು.

ಡಿಸಿಪಿಗಳಾದ ದಿನೇಶ್ ಕುಮಾರ್, ಸಿದ್ದಾರ್ಥ್ ಗೋಯಲ್ ಉಪಸ್ಥಿತರಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular