Thursday, July 23, 2026
Homeಜಿಲ್ಲೆಮಂಗಳೂರು : ನಾಪತ್ತೆಯಾಗಿದ್ದ ತಾಯಿ-ಮಗುವಿನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ !

ಮಂಗಳೂರು : ನಾಪತ್ತೆಯಾಗಿದ್ದ ತಾಯಿ-ಮಗುವಿನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ !

ಮಂಗಳೂರು : ಅಡ್ಯಾರ್ ಪದವು ನಿವಾಸಿ ಚೈತ್ರಾ ಮತ್ತು ಆಕೆಯ ಒಂದು ವರ್ಷದ ಮಗು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ಡ್ಯಾಂ ಬಳಿಯ ನೇತ್ರಾವತಿ ನದಿಯಲ್ಲಿ ನಡೆದಿದೆ.

ಮಾರ್ಚ್ 29 ರ ಶುಕ್ರವಾರ ಮಧ್ಯಾಹ್ನ ತಾಯಿ ಮತ್ತು ಮಗು ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು ಅಡ್ಯಾರ್ ಪದವು ನಿವಾಸಿ ಚೈತ್ರಾ ಹಾಗೂ ಒಂದು ವರ್ಷದ ಮಗು ದಿಯಾಂಶ್ ಮೃತ ರ್ದುದೈವಿಗಳು. ಇಬ್ಬರ ಮೃತದೇಹ ಹರೇಕಳ ಸೇತುವೆ ಬಳಿ ಪತ್ತೆಯಾಗಿದೆ.

ಹಿಂದಿನ ದಿನ ಅಂದರೆ ಮಾರ್ಚ್ 28 ರಂದು ಚೈತ್ರಾ ಅವರು ದೇರಳಕಟ್ಟೆಯ ಸೇವಾಶ್ರಮದಲ್ಲಿ ತಮ್ಮ ಮಗುವಿನ ಮೊದಲ ಹುಟ್ಟುಹಬ್ಬವನ್ನು ಆಚರಿಸಿದ್ದರು.ಕಾಣೆಯಾದ ದಿನದಿಂದ ಸಂಬಂಧಿಕರು, ಸಾಮಾಜಿಕ ಜಾಲತಾಣದ ಮೂಲಕ ಹುಡುಕಾಟಕ್ಕೆ ಮನವಿ ಮಾಡಿದ್ದರು. ಇದೀಗ ಮೃತದೇಹ ಪತ್ತೆಯಾಗಿದ್ದು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular