Sunday, November 22, 2026
Homeಸಿನಿಮಾಮಂಗಳೂರು : ತುಳು ಚಿತ್ರರಂಗದ ಯುವ ನಿರ್ದೇಶಕ ಸೂರಜ್ ಬೋಳಾರ್ ವಿಧಿವಶ!

ಮಂಗಳೂರು : ತುಳು ಚಿತ್ರರಂಗದ ಯುವ ನಿರ್ದೇಶಕ ಸೂರಜ್ ಬೋಳಾರ್ ವಿಧಿವಶ!

ಮಂಗಳೂರು : ತುಳು ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ ಹೊರಬಿದ್ದಿದ್ದು, ತುಳು ಸಿನಿಮಾ ನಿರ್ದೇಶಕ ಸೂರಜ್ ಬೋಳಾರ್ ಅವರು ನಿಧನರಾಗಿದ್ದಾರೆ.

ದಿವಂಗತ ಆನಂದ ಬೋಳಾರ್ ಅವರ ಪುತ್ರರಾಗಿರುವ ಸೂರಜ್ ಬೋಳಾರ್ ಅವರು ತಂದೆಯ ಕಲಾ ಹಾದಿಯಲ್ಲೇ ಮುನ್ನಡೆದು ತುಳು ಚಿತ್ರರಂಗದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದರು.

ತಂದೆಯ ಕಲಾಸಕ್ತಿಯನ್ನು ಮುಂದುವರಿಸಿಕೊಂಡು ಸಿನಿಮಾ ನಿರ್ದೇಶನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

ಸೂರಜ್ ಬೋಳಾರ್ ಅವರ ನಿಧನದ ಸುದ್ದಿ ತಿಳಿದು ತುಳು ಚಿತ್ರರಂಗದ ಕಲಾವಿದರು, ತಂತ್ರಜ್ಞರು ಹಾಗೂ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆಯಿಂದ ತುಳು ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular