Wednesday, July 22, 2026
Homeಜಿಲ್ಲೆಮಂಗಳೂರು ; ಡಿ.21ರಂದು ವಿಶ್ವಸಂಸ್ಥೆಯಲ್ಲಿ ಜಾಗತಿಕ ಧ್ಯಾನ.!

ಮಂಗಳೂರು ; ಡಿ.21ರಂದು ವಿಶ್ವಸಂಸ್ಥೆಯಲ್ಲಿ ಜಾಗತಿಕ ಧ್ಯಾನ.!

ಮಂಗಳೂರು : ವಿಶ್ವ ಧ್ಯಾನದ ದಿನವಾದ ಡಿ.21ರಂದು ವಿಶ್ವಸಂಸ್ಥೆಯಲ್ಲಿ ಶ್ರೀ ರವಿಶಂಕರ್ ಗುರೂಜಿ ಅವರು ಮುಖ್ಯ ಭಾಷಣ ಮಾಡಲಿದ್ದು ನಂತರ ಜಾಗತಿಕ ಧ್ಯಾನ ನೇರ ಪ್ರಸಾರವಾಗಲಿದೆ ಎಂದು ವಸಂತ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ ಡಿ.21ರಂದು ವಿಶ್ವ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಪ್ರಥಮ ವಿಶ್ವ ಧ್ಯಾನದ ದಿನದ ಆಚರಣೆಗೆ ಸಿದ್ಧವಾಗುತ್ತಿದೆ. ಅಂದು ಮಂಗಳೂರಿನ ಶ್ರೀ ರವಿಶಂಕರ್ ವಿದ್ಯಾಮಂದಿರ ಸಹಿತ 21 ಕಡೆಗಳಲ್ಲಿ ಧ್ಯಾನದ ದಿನ ಆಚರಣೆ ನಡೆಯಲಿದೆ ಎಂದರು. ಒತ್ತಡ ಮತ್ತು ಸಂಘರ್ಷಗಳ ನಿವಾರಣೆಯಲ್ಲಿ ಪ್ರಖ್ಯಾತಿಯಾಗಿರುವ ಗುರುದೇವರು,ಜಾಗತಿಕ ಗಣ್ಯರನ್ನು ,ವಿಶ್ವಸಂಸ್ಥೆಯ ಹಿರಿಯ ನಾಯಕರನ್ನು ,ರಾಯಾಬಾರಿಗಳನ್ನು ,ಅಂತರಾಷ್ಟ್ರೀಯ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ ಶಾಂತಿ ಮತ್ತು ಐಕ್ಯತೆಯ ಘೋಷಣೆಯಲ್ಲಿ ಧ್ಯಾನದ ಮುಖ್ಯ ಪಾತ್ರವನ್ನು ವಿವರಿಸಲಿದ್ದಾರೆ ಎಂದು ತಿಳಿಸಿದರು.

ಅಮಿತ ಸುಧೀರ್, ಸಹನಾ ಹೆಗ್ಡೆ, ಶ್ರೀಯಾ, ಬೀನಾ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular