ಮಂಗಳೂರು ; ವಿವಿ ಪ್ರಾಧ್ಯಾಪಕರ ಮೇಲಿನ ಆರೋಪ ಸಾಬೀತಾದ್ರೂ ಕುಲಪತಿ ಹುದ್ದೆಗಾಗಿ ಲಂಚ ಕೊಟ್ಟ ಪ್ರಕರಣವನ್ನು ವಿವಿ ಆಡಳಿತ ಮುಚ್ಚಿ ಹಾಕಿದೆ.
ರಾಜ್ಯದಲ್ಲೇ ಸಂಚಲನ ಮೂಡಿಸಿದ್ದ ಕುಲಪತಿ ಸೀಟ್ ಸೇಲ್ ಕೇಸ್ ಗೆ ಬಿಗ್ ಟ್ವಿಸ್ಟ್ ನಡೆದಿದೆ.ಪ್ರಾಧ್ಯಾಪಕನ ವಿರುದ್ದ ಲಂಚ ಕೊಟ್ಟ ಆರೋಪ ದೃಢಪಟ್ಟರೂ ಪ್ರಕರಣ ಮುಚ್ಚಿಹಾಕಲಾಗಿದೆ.
ಪ್ರಭಾವಿಗಳ ಒತ್ತಡಕ್ಕೆ ಮಣಿದು ಪ್ರಾಧ್ಯಾಪಕನ ವಿರುದ್ದ ಕ್ರಮ ಕೈಗೊಳ್ಳದೇ ಇತ್ಯರ್ಥ ನಡೆಸಿದ್ದಾರೆ.ಮಂಗಳೂರು ವಿವಿ ಪ್ರಾಧ್ಯಾಪಕರು ರಾಯಚೂರು ವಿವಿ ಕುಲಪತಿ ಹುದ್ದೆ ಪಡೆಯಲು ಲಂಚ ಕೊಟ್ಟಿದ್ದರು.ಮಂಗಳೂರು ವಿವಿ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಜಯಶಂಕರ್ 16 ಲಕ್ಷ ಲಂಚ ಕೊಟ್ಟರೂ ಕುಲಪತಿ ಹುದ್ದೆ ಸಿಗಲಿಲ್ಲದ ಹಿನ್ನೆಲೆ ಪೊಲೀಸ್ ದೂರು ನೀಡಿದ್ದರು.
ಕಂಕನಾಡಿ ನಗರ ಠಾಣೆಯಲ್ಲಿ ಹಣ ಪಡೆದವರ ವಿರುದ್ದ ಪ್ರಕರಣ ದಾಖಲಾಗಿತ್ತು,ಈ ಮಧ್ಯೆ ಕುಲಪತಿ ಹುದ್ದೆ ಪಡೆಯಲು ಲಂಚ ನೀಡಿದ್ದ ಜಯಶಂಕರ್ ಗೆ ಮಂಗಳೂರು ವಿವಿ ಸಿಂಡಿಕೇಟ್ ನೋಟೀಸ್ ನೀಡಿತ್ತು.
2021ರ ಏ.9 ರ ಸಿಂಡಿಕೇಟ್ ಸಭೆಯಲ್ಲಿ ಜಯಶಂಕರ್ ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶ ನೀಡಿದ್ದರು.
2022ರ ಜೂನ್ 1ರಂದು ತನಿಖಾ ವರದಿ ಸಲ್ಲಿಸಿದ್ದ ನಿವೃತ್ತ ಜಿಲ್ಲಾ ಜಡ್ಜ್ ಬೈಲೂರು ಶಂಕರ ರಾಮ ಸಮಿತಿ ಕುಲಪತಿ ಹುದ್ದೆಗೆ ಲಂಚ ಕೊಟ್ಟಿರುವುದು ದೃಢಪಟ್ಟಿದೆ ಎಂದು ವರದಿ ನೀಡಲಾಗಿತ್ತು.
ಕುಲಪತಿ ಹುದ್ದೆ ಪಡೆಯಲು ನ್ಯಾಯೋಚಿತವಲ್ಲದ ದಾರಿಯಲ್ಲಿ ಹಣ ನೀಡಿದ್ದು ಸರಿಯಲ್ಲ,ಮಂಗಳೂರು ವಿವಿಯ ಹೆಸರು, ಘನತೆ, ಪ್ರತಿಷ್ಠೆ ಕೆಳಮಟ್ಟಕ್ಕೆ ಇಳಿದಂತಾಗಿದೆ , ಮಂಗಳೂರು ವಿವಿ ಉದ್ಯೋಗಿಗಳ ಸೇವಾ ನಡತೆ ನಿಯಮಗಳ ಉಲ್ಲಂಘನೆಯಾಗಿದೆ,ಪ್ರಾಧ್ಯಾಪಕ ಜಯಶಂಕರ್ ಮೇಲಿನ ಆರೋಪ ದೃಢಪಟ್ಟಿದೆ ಎಂದು ಸಮಿತಿ ವರದಿ ನೀಡಿತ್ತು.
ಆದರೆ ಈ ವರದಿಯಲ್ಲಿ ಆರೋಪ ದೃಢಪಟ್ಟರೂ ಕೇಸು ಮುಚ್ಚಿ ಹಾಕಿಸಿದ ವಿಶ್ವ ವಿಧ್ಯಾನಿಲಯ ಪ್ರಾಧ್ಯಾಪಕ ಜಯಶಂಕರ್ ಗೆ ತಿಳುವಳಿಗೆ ಪತ್ರ ನೀಡಿ ಪ್ರಕರಣ ಇತ್ಯರ್ಥಗೊಳಿಸಿದೆ.
ಗಂಭೀರ ಪ್ರಕರಣ ಒತ್ತಡಕ್ಕೆ ಬಿದ್ದು ಮುಚ್ಚಿ ಹಾಕಿತಾ ವಿವಿ ಆಡಳಿತ ಎಂದು ಆರೋಪ.